ರಾಜ್ಯಆ್ಯಂಬುಲೆನ್ಸ್ ಗಳಿಗೆ ದಾರಿ ಮಾಡಿಕೊಡಲು ಬಂತು 'ಬೈಕ್ ಎಸ್ಕಾರ್ಟ್': ಜನರ ಜೀವ ಉಳಿಸಲು ಹೊಸ ಸೇವೆ ಆರಂಭಿಸಿದ ಯುವಕ!
ನಮ್ಮ ಬೆಂಗಳೂರು ದಿನದಿಂದ ದಿನಕ್ಕೆ ಅಗಾಧವಾಗಿ ಬೆಳೆಯ ತೊಡಗಿದ್ದು, ಇಲ್ಲಿ ನಾನಾ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಇದರಲ್ಲಿ ಪ್ರಮುಖ ಸಮಸ್ಯೆ ಸಂಚಾರ ದಟ್ಟಣೆ. ಈ ಸಂಚಾರ ದಟ್ಟಣೆಯಿಂದಾಗಿ ಸಕಾಲಕ್ಕೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗದೆ ಅಗಾಗ್ಗೆ ಸಾವುನೋವು ಸಂಭವಿಸುವುದನ್ನು ನಾವು ನೋಡುತ್ತಿರುತ್ತೇವೆ.