ರಾಜ್ಯನಾಳೆ 'ನಮ್ಮ ಮೆಟ್ರೋ' ರೈಲು ಒಂದು ಗಂಟೆ ಮುಂಚಿತವಾಗಿ ಆರಂಭ!
ನಾಳೆ ನಮ್ಮ ಮೆಟ್ರೋ ಸೇವೆ ಒಂದು ಗಂಟೆ ಮುಂಚಿತವಾಗಿ ಆರಂಭವಾಗಲಿದೆ. ಕರ್ನಾಟಕ ಪೊಲೀಸ್ ವತಿಯಿಂದ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮಾರ್ಚ್ 10 ರಂದು ಬೆಳಗ್ಗೆ ಎಂದಿಗಿಂತ ಒಂದು ಗಂಟೆ ಬೇಗನೆ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಲಿದೆ.