ಬೆಳ್ಳಂದೂರು

ಬೆಂಗಳೂರು: ಬೆಳ್ಳಂದೂರಿನಲ್ಲಿ ದಲಿತರ ಸ್ಮಶಾನ ಕಬಳಿಸುವ ಯತ್ನ- ಎಎಪಿ ಆರೋಪ
100 ಕೋಟಿ ಮೌಲ್ಯದ ಸ್ಮಶಾನ ಭೂಮಿ ಒತ್ತುವರಿ ಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ನಾಲ್ಕು ತಿಂಗಳ ಹಿಂದೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಶೋಕ್ ಮತ್ತು ಸುರೇಶ್ ದೂರಿದ್ದಾರೆ.

ಬೆಂಗಳೂರು: ಬೆಳ್ಳಂದೂರು ವಾರ್ಡ್ ಚರಂಡಿಗಳು ಮತ್ತೆ ಅತಿಕ್ರಮಣ, ನಿವಾಸಿಗಳಿಗೆ ಪ್ರವಾಹದ ಭೀತಿ!
ಈ ಹಿಂದೆ ಜುನ್ನಸಂದ್ರ ಕೆರೆ ಮತ್ತು ಸೌಲ್ ಕೆರೆ (ಕೆರೆ)ಗೆ ಸಂಪರ್ಕ ಕಲ್ಪಿಸುವ ಮಳೆನೀರು ಚರಂಡಿಗಳ (ಎಸ್‌ಡಬ್ಲ್ಯುಡಿ) ಒತ್ತುವರಿ ತೆರವುಗೊಳಿಸಲಾಗಿತ್ತು. ಇದೀಗ ಬೆಳ್ಳಂದೂರು ವಾರ್ಡ್‌ನ ಚರಂಡಿಗಳು ಮತ್ತೊಮ್ಮೆ ಅತಿಕ್ರಮಣಕ್ಕೆ ಒಳಗಾಗಿವೆ ಎಂದು ಮಹದೇವಪುರ ನಿವಾಸಿಗಳು ಆರೋಪಿಸಿದ್ದು, ಶಾಂತಿ ಲೇಔಟ್, ರೈನ್‌ಬೋ ಡ್ರೈವ್ ಲೇಔಟ್, ಜುನ್ನಸಂದ್ರ ಗ್ರಾಮದ ನಿವಾಸಿಗಳಲ್ಲಿ ಪ್ರವಾಹದ ಭೀತಿಗೆ ಕಾರಣವಾಗಿದೆ.

ಬೆಂಗಳೂರು: ಬೆಳ್ಳಂದೂರು ಶಾಲೆ ಆವರಣದಲ್ಲಿ ಸ್ಫೋಟಕ ಪತ್ತೆ, ಹೆಚ್ಚಿದ ಆತಂಕ
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಘಟನೆ ಮರೆಯುವ ಮುನ್ನವೇ ಬೆಂಗಳೂರಿನ ಶಾಲೆಯೊಂದರ ಮುಂಭಾಗದಲ್ಲಿ ಸ್ಫೋಟಕ ಪತ್ತೆಯಾಗಿದ್ದು, ಇದು ಆತಂಕ ಹೆಚ್ಚಾಗುವಂತೆ ಮಾಡಿದೆ.

ಬೆಂಗಳೂರು: ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು, ಸಿಸಿಟಿವಿ ದೃಶ್ಯ ನೀಡಿತ್ತು ಸುಳಿವು!
ಕಸವನಹಳ್ಳಿಯಲ್ಲಿರುವ ಸಮೃದ್ಧಿ ಅಪಾರ್ಟ್‌ಮೆಂಟ್ ಸಮುಚ್ಚಯದ ಎದುರು ಕಾರಿನ ಚಕ್ರ ಹರಿದು ಮೂರು ವರ್ಷದ ಹೆಣ್ಣು ಮಗುವೊಂದು ಮೃತಪಟ್ಟಿದ್ದು, ಈ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು: ಅಪಾರ್ಟ್ ಮೆಂಟ್ ನ 12ನೇ ಮಹಡಿಯಿಂದ ಬಿದ್ದು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ತನಿಖೆಗೆ ಪೋಷಕರ ಆಗ್ರಹ
ಶಾಲೆಗೆ ಹೋಗಿದ್ದ 10ನೇ ತರಗತಿ ವಿದ್ಯಾರ್ಥಿನಿ ವಾಪಸ್ ಮನೆಗೆ ಬಂದು ಸಾವನ್ನಪ್ಪಿರೋ ದಾರುಣ ಘಟನೆ ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. 14 ವರ್ಷದ ಜೆಸ್ಸಿಕಾ ಮೃತ ಬಾಲಕಿ.

ಅಧಿಕಾರಿಗಳ ಅಜಾಗರೂಕತೆ: ಬಿಡಬ್ಲ್ಯುಎಸ್ ಎಸ್ ಬಿ ಕಚೇರಿ ಎದುರೇ 3 ದಿನಗಳಿಂದ ಹರಿಯುತ್ತಿತ್ತು ಕೊಳಚೆನೀರು
ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳ ನಿರ್ಲಕ್ಷ್ಯತನ ಆಗಾಗ್ಗೆ ಬಹಿರಂಗವಾಗುತ್ತಿರುತ್ತದೆ. ಈಗ ಬೆಳ್ಳಂದೂರು ನಿವಾಸಿಗಳು BWSSB ವಿರುದ್ಧ ಆರೋಪಿಸುತ್ತಿದ್ದಾರೆ.

ಬೆಳ್ಳಂದೂರು ಫ್ಲೈ ಓವರ್ ಬೀಳಿಸುವ ಯೋಜನೆ ಇಲ್ಲ: ಬಿಎಂಆರ್ ಸಿಎಲ್
ಮೆಟ್ರೋ ಕಾಮಗಾರಿಗಾಗಿ ಹೊರ ವರ್ತುಲ ರಸ್ತೆಯಲ್ಲಿನ ಫ್ಲೈ ಓವರ್ ನ್ನು ಧ್ವಂಸಗೊಳಿಸುವುದಿಲ್ಲ ಎಂದು ಬಿಎಂಆರ್ ಸಿಎಲ್ ಗುರುವಾರ ಖಚಿತಪಡಿಸಿದೆ. ಫ್ಲೈ ಓವರ್ ನಡುವೆ ಲಭ್ಯವಿರುವ ಜಾಗದಲ್ಲಿ ಕಾಮಗಾರಿ ಮಾಡಲಾಗುವುದು ಎಂದು ಅದು ತಿಳಿಸಿದೆ.

ಬೆಂಗಳೂರು: ಕ್ವೆಸ್ಟ್ ಗ್ಲೋಬಲ್ ಅಂಡ್ ನಾಸ್ಕಾಮ್ ಫೌಂಡೇಶನ್ ನಿಂದ ಬೆಳ್ಳಂದೂರಿನ ಲೇಔಟ್ ದತ್ತು!
ಬೆಳ್ಳಂದೂರಿನ ಮಿಥುನ್ ರೆಡ್ಡಿ ಲೇ ಔಟ್ ನ್ನು ಕ್ವೆಸ್ಟ್ ಗ್ಲೋಬಲ್ ಅಂಡ್ ನಾಸ್ಕಾಮ್ ಫೌಂಡೇಶನ್ ದತ್ತು ಪಡೆದುಕೊಂಡಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಇಲ್ಲಿ ಜೀವನ ಸಾಗಿಸಲು ಕಷ್ಟವಾಗಿರುವ ನಿರ್ಗತಿಕರಿಗೆ ಸಹಾಯ ಮಾಡಲು ವರ್ಷದವರೆಗೆ ಫೌಂಡೇಶನ್ ಅಭಿಯಾನ ಕೈಗೊಂಡಿದೆ.

ಮಳೆ ಎಫೆಕ್ಟ್: ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಹಾವಳಿ
ಕಳೆದ 2 ದಿನಗಳಿಂದ ಸತತವಾಗಿ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಭಾರೀ ಪ್ರಮಾಣದ ನೊರೆ ಉತ್ಪತ್ತಿಯಾಗಿದ್ದು, ಗುಪ್ಪೆ ಗುಪ್ಪೆಯಾಗಿ ಗಾಳಿಯಲ್ಲಿ ತೇಲುತ್ತಾ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು...

