ಬೆಳೆಗಳ ಬೆಂಬಲ ಬೆಲೆ

2ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ತ.ನಾಡು ರೈತರ ಬೆಂಬಲ, ಈಗಲೂ ಮಾತುಕತೆಗೆ ಸಿದ್ಧ ಎಂದ ಕೇಂದ್ರಸರ್ಕಾರ
ಕನಿಷ್ಠ ಬೆಂಬಲ ಬೆಲ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜದಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದ್ದು, ರೈತರ ಪ್ರತಿಭಟನೆಗೆ ತಮಿಳುನಾಡು ರೈತರು ಕೂಡ ಬೆಂಬಲ ಘೋಷಣೆ ಮಾಡಿದ್ದಾರೆ.
ಯಾವುದೂ ಹೊಸ ಬೇಡಿಕೆಯಲ್ಲ, ರೈತರ ಮೇಲೆ ಸರ್ಕಾರದ ದಾಳಿ ನಾಚಿಕೆಗೇಡು: ಪ್ರಧಾನಿಗೆ SKW ಪತ್ರ
ರೈತರು ಹಾಲಿ ಇಡುತ್ತಿರುವ ಯಾವುದೂ ಹೊಸ ಬೇಡಿಕೆಗಳಲ್ಲ.. ಈ ಹಿಂದೆ ಸರ್ಕಾರ ಈಡೇರಿಸುವ ಭರವಸೆ ನೀಡಿ ಅದನ್ನು ಮಾಡಿಲ್ಲದಿರುವುದರಿಂದಲೇ ರೈತರ ಮತ್ತೆ ಬೀದಿಗಿಳಿದಿದ್ದು, ಧರಣಿ ನಿರತ ರೈತರ ಮೇಲಿನ ಮೋದಿ ಸರ್ಕಾರದ ದಾಳಿ ನಾಚಿಕೆಗೇಡು ಎಂದು ರೈತಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ರೈತರ ಪ್ರತಿಭಟನೆ ಎಫೆಕ್ಟ್: ಪಂಜಾಬ್ ಗೆ ಡೀಸೆಲ್, ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ!
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (minimum support price-MSP) ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರೈತಪರ ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡಿರುವಂತೆಯೇ ಇತ್ತ ಪಂಜಾಬ್ ಗೆ ಸರಬರಾಜಾಗುತ್ತಿದ್ದ ಡೀಸೆಲ್ ಮತ್ತು ಗ್ಯಾಸ್ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಲಾಗಿದೆ.

ಆರು ತಿಂಗಳ ರೇಷನ್, ಡೀಸೆಲ್, ಟ್ರಾಕ್ಟರ್, ಸೂಜಿಯಿಂದ ಕಲ್ಲು ಹೊಡೆಯುವ ಸುತ್ತಿಗೆವರೆಗೆ..: ಪ್ರತಿಭಟನೆಗೆ ರೈತರ ಸಿದ್ಧತೆ ಹೀಗಿದೆ...
ಬೆಂಬಲ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಪರ ಸಂಘಟನೆಗಳು ಕರೆ ನೀಡಿರುವ ದೆಹಲಿ ಪ್ರತಿಭಟನೆ (Farmers Protest)ಗೆ ರೈತರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಸಕಲ ಸಿದ್ಧತೆಗಳೊಂದಿಗೆ ರೈತರು ರಾಜಧಾನಿ ದೆಹಲಿ ಗಡಿಯಲ್ಲಿ ಜಮಾಯಿಸುತ್ತಿದ್ದಾರೆ.

