ಬೆದರಿಕೆ ಸಂದೇಶ

34 ಮಾನವ ಬಾಂಬ್, 400 ಕೆಜಿ RDX, 14 ಪಾಕ್ ಭಯೋತ್ಪಾದಕರು! ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ; ಎಲ್ಲೆಡೆ ಕಟ್ಟೆಚ್ಚರ!
ಲಷ್ಕರ್-ಎ-ಜಿಹಾದಿ ಎಂದು ಕರೆದುಕೊಳ್ಳುವ ಸಂಘಟನೆಯು 14 ಪಾಕಿಸ್ತಾನಿ ಭಯೋತ್ಪಾದಕರು ಭಾರತವನ್ನು ಪ್ರವೇಶಿಸಿದ್ದಾರೆ ಮತ್ತು ಸ್ಫೋಟಗಳಿಗೆ 400 ಕೆಜಿ ಆರ್‌ಡಿಎಕ್ಸ್ ಬಳಸಲಾಗುವುದು ಎಂದು ಹೇಳಿದೆ.

ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ, 5 ಕೋಟಿ ರೂ ಗೆ ಬೇಡಿಕೆ: ಹಾವೇರಿಯಲ್ಲಿ ವ್ಯಕ್ತಿ ಬಂಧನ
35 ವರ್ಷದ ಭಿಕರಾಮ್ ಜಲರಾಮ್ ಬಿಷ್ಣೋಯಿ ಬಂಧಿತ ಆರೋಪಿ. ವಿಚಾರಣೆಯ ನಂತರ ಮುಂಬೈನ ವರ್ಲಿ ಪೊಲೀಸ್ ಠಾಣೆಯ ತಂಡ ಬುಧವಾರ ಆರೋಪಿಯನ್ನು ಬಂಧಿಸಿದೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಜರಂಗ್ ಪುನಿಯಾಗೆ ಬೆದರಿಕೆ ಸಂದೇಶ
ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಸಂದೇಶ ಬಂದಿರುವುದಾಗಿ ಬಜರಂಗ್ ಪುನಿಯಾ ಸೋನಿಪತ್‌ನ ಬಹಲ್‌ಗಢ ಪೊಲೀಸ್ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ವಾಂಖೆಡೆ ಸ್ಟೇಡಿಯಂನಲ್ಲಿ IND vs NZ Semi-final: ಬೆದರಿಕೆ ಸಂದೇಶ ಕಳುಹಿಸಿದ ಯುವಕನ ಬಂಧನ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ಅಹಿತಕರ ಘಟನೆ ನಡೆಯಲಿದೆ ಎಂದು ಟ್ವಿಟರ್‌ನಲ್ಲಿ ಬಂದ ಬೆದರಿಕೆ ಸಂದೇಶದ ನಂತರ ಮುಂಬೈ ಪೊಲೀಸರು ಬಿಗಿಭದ್ರತೆಯನ್ನು ಕೈಗೊಂಡಿದ್ದಾರೆ. ಈ ಬೆದರಿಕೆ ಸಂದೇಶಕ್ಕೆ ಸಂಬಂಧಿಸಿದಂತೆ ಲಾತೂರ್ ಜಿಲ್ಲೆಯ 17 ವರ್ಷದ ಯುವಕನನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಭಾರತದಲ್ಲಿ ಬಾಂಬ್ ಸ್ಫೋಟ, ಪ್ರಧಾನಿ ಮೋದಿಯನ್ನು ಕೊಲ್ಲುವ ಬೆದರಿಕೆ ಸಂದೇಶ; ತನಿಖೆ ಆರಂಭಿಸಿದ ಪುಣೆ ಪೊಲೀಸರು
ಮಹಾರಾಷ್ಟ್ರದ ಪುಣೆಯ ವ್ಯಕ್ತಿ ನಡೆಸುತ್ತಿರುವ ಹಿಂದೂ ಧರ್ಮದ ಕುರಿತಾದ ಸಂಗತಿಗಳಿಗೆ ಮೀಸಲಾದ ವೆಬ್‌ಸೈಟ್‌ಗೆ ಭಾರತದಲ್ಲಿ ಬಾಂಬ್ ಸ್ಫೋಟ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲುವುದಾಗಿ ವ್ಯಕ್ತಿಯೊಬ್ಬರಿಂದ ಕಾಮೆಂಟ್ ಬಂದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಸ್ವದೇಶಕ್ಕೆ ತೆರಳುವಂತೆ ಭಾರತೀಯ ಮೂಲದ ಅಮೆರಿಕಾ ಸಂಸದೆ ಪ್ರಮೀಳಾ ಜಯಪಾಲ್ ಗೆ ಅಪರಿಚಿತನಿಂದ ಬೆದರಿಕೆ!
ಭಾರತ ಮೂಲದ ಅಮೆರಿಕದ ಸಂಸದೆ ಪ್ರಮೀಳಾ ಜಯಪಾಲ್ ಅವರಿಗೆ ಸ್ವದೇಶಕ್ಕೆ ವಾಪಸ್ ಹೋಗುವಂತೆ ನಿಂದಿಸಿ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದಾನೆ.

26/11 ಮಾದರಿಯಲ್ಲಿ ಮತ್ತೆ ದಾಳಿ: ಅನಾಮಧೇಯ ವ್ಯಕ್ತಿಯಿಂದ ಮುಂಬೈ ಪೊಲೀಸರಿಗೆ ಬೆದರಿಕೆ
26/11 ಮಾದರಿಯಲ್ಲಿ ಮುಂಬೈನಲ್ಲಿ ಮತ್ತೆ ದಾಳಿ ಮಾಡಲಾಗುತ್ತದೆ ಎಂದು ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ಬಂದಿದೆ.

ಬೆಂಗಳೂರಿನಿಂದ ಆದಿತ್ಯ ಠಾಕ್ರೆಗೆ ಜೀವ ಬೆದರಿಕೆ ಸಂದೇಶ: ವ್ಯಕ್ತಿಯ ಬಂಧನ
ಮಹಾರಾಷ್ಟ್ರದ ಸಚಿವ ಆದಿತ್ಯ ಠಾಕ್ರೆಗೆ ಬೆಂಗಳೂರಿನಿಂದ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಕ್ರೈಮ್ ಬ್ರಾಂಚ್ ನ ಸೈಬರ್ ಘಟಕದ ಪೊಲೀಸರು ಬಂಧಿಸಿದ್ದಾರೆ. ಜೈಸಿಂಗ್ ರಜಪೂತ್ ಬಂಧಿತ ವ್ಯಕ್ತಿಯಾಗಿದ್ದಾನೆ.

ಪ್ರಧಾನಿ ಮೋದಿಗೆ ಬೆದರಿಕೆ: ಬಲೂನ್'ನಲ್ಲಿ ಬೆದರಿಕೆ ಸಂದೇಶ ಕಳುಹಿಸಿದ ಪಾಕ್
ಭಾರತೀಯ ಸೇನೆಗೆ ಸೀಮಿತ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸತತ ಯತ್ನ ನಡೆಸುತ್ತಿರುವ ಪಾಕಿಸ್ತಾನ, ಬಲೂನ್ ಮೂಲಕ ಇದೀಗ ಬೆದರಿಕೆ ಸಂದೇಶವೊಂದನ್ನು ರವಾನಿಸಿದೆ...

