ರಾಜ್ಯಬೆಡ್ ಬುಕ್ಕಿಂಗ್ ಹಗರಣ ಬಯಲಿಗೆ ಬಂದದ್ದು ಹೇಗೆ, ಕೋಮುವಾದಕ್ಕೆ ತಿರುಗಲು ಕಾರಣವೇನು, ಬಿಬಿಎಂಪಿ ಅಧಿಕಾರಿಗಳು ಹೇಳುವುದೇನು?
ರಾಜಕೀಯ ನಾಯಕರು ತಮ್ಮ ಕ್ಷೇತ್ರದ ಜನರಿಗೆ ಆಸ್ಪತ್ರೆಗಳಲ್ಲಿ ಬೆಡ್ ಕೇಳಿದಾಗ ಸಿಗದಿದ್ದುದು ಬೆಡ್ ಹಂಚಿಕೆ ಹಗರಣ ಬೆಳಕಿಗೆ ಬರಲು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮೂಲಕವೇ ಹಗರಣವನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸತೀಶ್ ರೆಡ್ಡಿ ಬಯಲಿಗೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ.