ಬೆಂಗಳೂರು ಬಂದ್

ಕನ್ನಡ ಭಾಷಾ ವಿವಾದ: ಉತ್ತರ ಭಾರತೀಯರಿಗೆ 'ಬೆಂಗಳೂರು ಬಂದ್' ಚರ್ಚೆ ಹುಟ್ಟುಹಾಕಿದ x ಫೋಸ್ಟ್!
ಸಾಮಾಜಿಕ ಮಾಧ್ಯಮವೊಂದರಲ್ಲಿ 'ಉತ್ತರ ಭಾರತೀಯರಿಗೆ ಬೆಂಗಳೂರು ಬಂದ್' ಎಂಬ ಫೋಸ್ಟ್ ವೈರಲ್ ಆಗಿದ್ದು, ಆನ್ ಲೈನ್ ನಲ್ಲಿ ಕನ್ನಡ ಭಾಷೆ ವಿವಾದ ಕುರಿತು ಜೋರಾದ ಚರ್ಚೆ ನಡೆಯುತ್ತಿದೆ.

ಬೆಂಗಳೂರು ಬಂದ್ ವೇಳೆ ಗದ್ದಲ: ಹೋಟೆಲ್‌ನಲ್ಲಿ ಗಲಾಟೆ ಮಾಡಿದ ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ
ಬೆಂಗಳೂರು ಬಂದ್ ವೇಳೆ ಹೊಟೇಲ್‌ನಲ್ಲಿ ಗಲಾಟೆ ಉಂಟುಮಾಡಿದ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ಬುಧವಾರ ಬಂದ್ ಆಚರಿಸಲಾಯಿತು.

ನಗರದಲ್ಲಿ ಶಾಂತಿಯುತ ಬಂದ್; 3 ಬಿಜೆಪಿ ಶಾಸಕರು ಸೇರಿ 1000 ಕ್ಕೂ ಹೆಚ್ಚು ಜನರ ಬಂಧನ, ಬಿಡುಗಡೆ: ಪೊಲೀಸ್ ಕಮಿಷನರ್ ಬಿ ದಯಾನಂದ
ಕಾವೇರಿಗಾಗಿ ಮಂಗಳವಾರ ನಡೆದ ಬೆಂಗಳೂರು ಬಂದ್ ಬಹುತೇಕ ಶಾಂತಿಯುತವಾಗಿ ಪೂರ್ಣಗೊಂಡಿದ್ದು, ಬಂದ್ ವೇಳೆ 3 ಬಿಜೆಪಿ ಶಾಸಕರು ಸೇರಿದಂತೆ 1000 ಕ್ಕೂ ಹೆಚ್ಚು ಜನರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿದ್ದಾರೆ.

ಬೆಂಗಳೂರು ಬಂದ್ ಎಫೆಕ್ಟ್: ಟೆಕ್ಕಿಗಳಿಗೆ ವರ್ಕ್ ಫ್ರಂ ಹೋಮ್; ರಸ್ತೆಗಳು ನಿರ್ಜನ
ಕಾವೇರಿ ನದಿ ನೀರಿಗಾಗಿ ರೈತಪರ ಸಂಘಟನೆಗಳು ಕರೆಕೊಟ್ಟಿದ್ದ ಬೆಂಗಳೂರು ಬಂದ್ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಯ ಟೆಕ್ಕಿಗಳಿಗೆ ವರ್ಕ್ ಫ್ರಂ ಹೋಮ್ ಗೆ ಸೂಚಿಸಲಾಗಿತ್ತು.

ಬೆಂಗಳೂರು ಬಂದ್ ಎಫೆಕ್ಟ್: 13 ವಿಮಾನ ರದ್ದು, ಪ್ರಯಾಣಿಕರಿಗೆ ಅನಾನುಕೂಲ
ಕಾವೇರಿಗಾಗಿ ಮಂಗಳವಾರ ನಡೆದ ನಡೆದ ಬಂದ್ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ಬರಬೇಕಿದ್ದ 13 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

'ಕಾವೇರಿ'ಗಾಗಿ ಬೆಂಗಳೂರು ಬಂದ್: ತಮಿಳುನಾಡು ಬಸ್ ಸೇವೆಗೆ ಅಡ್ಡಿ, ಪ್ರಯಾಣಿಕರು, ಐಟಿ ಉದ್ಯೋಗಿಗಳಿಗೆ ತೊಂದರೆ!
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದರ ವಿರುದ್ಧ ವಿವಿಧ ಸಂಘಟನೆಗಳು ನಡೆಸುತ್ತಿರುವ 'ಬೆಂಗಳೂರು ಬಂದ್' ಹಿನ್ನೆಲೆಯಲ್ಲಿ ತಮಿಳುನಾಡು - ಕರ್ನಾಟಕ ನಡುವಿನ ಬಸ್ ಸೇವೆಗೆ ಅಡ್ಡಿಯಾಗಿದೆ. ತಮಿಳುನಾಡಿನ ಹಲವಾರು ಬಸ್‌ಗಳನ್ನು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಜುಜುವಾಡಿಯಲ್ಲಿ ನಿಲ್ಲಿಸಲಾಗುತ್ತಿದೆ.

ಬೆಂಗಳೂರು ಬಂದ್: ನಗರ ನಿವಾಸಿಗಳಿಂದ ಮಿಶ್ರ ಪ್ರತಿಕ್ರಿಯೆ, ಜನರ ಸಹಜ ಜೀವನಕ್ಕೆ ತಟ್ಟಿದ ಬಂದ್ ಬಿಸಿ
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು ಸೆ.26ರಂದು ಕನ್ನಡ ಪರ ಸಂಘಟನೆಗಳು ಮತ್ತು ರೈತರು ಕರೆ ನೀಡಿರುವ ಬಂದ್‌ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಾಳೆ ಬಂದ್ ಹಿನ್ನೆಲೆ ಕರ್ನಾಟಕ ರಾಜ್ಯ ಮುಕ್ತ ವಿವಿ ಪದವಿ, ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ; ಕಾನೂನು ವಿವಿ ಪರೀಕ್ಷೆಗಳೂ ಮುಂದಕ್ಕೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ಭುಗಿಲೆದ್ದಿದ್ದು, ನಾಳೆ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿರುವ ಹಿನ್ನೆಲೆಯಲ್ಲಿ ಪ್ರಮುಖ ವಿವಿಗಳು ಪರೀಕ್ಷೆಗಳನ್ನು ಮುಂದೂಡಿವೆ.

ಯಾವುದೇ ಕಾರಣಕ್ಕೂ ಬಂದ್ ನಿಲ್ಲಿಸಲ್ಲ: ಕುರುಬೂರು ಶಾಂತಕುಮಾರ್; ಬಂದ್ ಗೆ ನನ್ನ ಸಂಪೂರ್ಣ ಬೆಂಬಲ- ಮಾಜಿ ಸಿಎಂ ಕುಮಾರಸ್ವಾಮಿ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇಂದು ಮಂಗಳವಾರ ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಅದರ ಪರಿಣಾಮ ಬೆಳಗಿನ ಜಾವದಿಂದಲೇ ಕಾಣತೊಡಗಿದೆ.

