ಬೆಂಗಳೂರು ಟೆಕ್ ಶೃಂಗ

ಐಟಿ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪುನರುಚ್ಚರಿಸಿದ ಬೆಂಗಳೂರು: ಡಿಸಿಎಂ ಅಶ್ವತ್ಥ್ ನಾರಾಯಣ್
ಬೆಂಗಳೂರು ತಂತ್ರಜ್ಞಾನ ಶೃಂಗ-2020 ಯಶಸ್ವಿಯಾಗಿ ಮುಗಿದಿದ್ದು, ಕೊರೋನಾ ನಡುವೆಯೂ ಈವರೆಗೆ ಜಗತ್ತಿನಲ್ಲಿ ನಡೆದ ಅತಿದೊಡ್ಡ ತಂತ್ರಜ್ಞಾನ ಶೃಂಗವಾಗಿ ಖ್ಯಾತಿಗಳಿಸಿದೆ. ಶೃಂಗಸಭೆಯಲ್ಲಿ ಐಟಿ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಬೆಂಗಳೂರು ಪುನರುಚ್ಛರಿಸಿದೆ.

ಮುಂದಿನ ವರ್ಷದ ಬಿಟಿಎಸ್ ನ.18 ರಿಂದ 20: ಹೈಬ್ರೀಡ್ ಮಾದರಿ
ಮುಂದಿನ ವರ್ಷದ ಬೆಂಗಳೂರು ಟೆಕ್ ಸಮಿಟ್ ನವೆಂಬರ್ 18-, 19 ಮತ್ತು 20 ರಂದು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ.

ಬೆಂಗಳೂರು ಟೆಕ್ ಶೃಂಗಕ್ಕೆ ಯಶಸ್ವಿ ತೆರೆ: ದೇಶ ವಿದೇಶದ 2.5 ಕೋಟಿ ಜನರನ್ನು ತಲುಪಿ ದಾಖಲೆ ಬರೆದ ಶೃಂಗ
ಕೊರೋನಾ ಸಾಂಕ್ರಾಮಿಕ ರೋಗ ಸವಾಲಿನ ನಡುವೆಯೇ ದೇಶದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಸಂಪೂರ್ಣ ವರ್ಚುವಲ್ ರೂಪದಲ್ಲಿ ನಡೆದ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಸಮಾವೇಶ-2020 ಅತ್ಯಂತ ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿಗೆ ವರ್ಚುಯಲ್ ವೇದಿಕೆಯ ಮೂಲಕ ನಡೆದ ಈ ಪ್ರತಿಷ್ಠಿತ ಶೃಂಗವು 2.5 ಕೋಟಿಗೂ ಹೆಚ್ಚು ದೇಶ- ವಿದೇಶಿಯರನ್ನು ತಲುಪಿ ದಾಖಲೆ ಸೃಷ್ಟಿಸಿದೆ.

