ಬೆಂಗಳೂರು ಕಂಬಳ

ಬೆಂಗಳೂರು ಕಂಬಳ: ಓಟದಲ್ಲಿ ಚಿನ್ನದ ಪದಕ ಗೆದ್ದ 'ಕಾಂತಾರ' ಕೋಣಗಳು!
ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳಿಗೆ ಚಿನ್ನದ ಪದಕ ಗೆದ್ದಿವೆ.

ಎರಡನೇ ದಿನಕ್ಕೆ ಕಾಲಿಟ್ಟ ಬೆಂಗಳೂರು ಕಂಬಳ: ಇಂದಿನ ಕಾರ್ಯಕ್ರಮದ ವಿಶೇಷತೆಗಳು ಹೀಗಿವೆ....
ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆ ಕಂಬಳ ಎರಡನೇ ದಿನಕ್ಕೆ ಕಾಲಿಟ್ಟಿದೆ.

ರೆಡಿ, ಸ್ಟೆಡಿ.. ಗೋ... ಕರಾವಳಿಯ ಕಂಬಳಕ್ಕೆ ಬೆಂಗಳೂರು ಸಜ್ಜು: ಇಂದಿನಿಂದ ಆರಂಭ
ಉದ್ಯಾನ ನಗರಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅದ್ಧೂರಿ ಕರಾವಳಿಯ ಕಂಬಳಕ್ಕೆ ಸಿದ್ದತೆಗಳು ಪೂರ್ಣಗೊಂಡಿವೆ. ಬೆಳಗ್ಗೆ 10.30ಕ್ಕೆ ಅರಮನೆ ಮೈದಾನದಲ್ಲಿ ಕಾರ್ಯಕ್ರಮಗಳು ಔಪಚಾರಿಕವಾಗಿ ಶುರುವಾಗಲಿವೆ. ಎರಡು ದಿನಗಳ ಕಾಲ ಬೆಂಗಳೂರು ಕಂಬಳ ನಡೆಯಲಿದೆ.

ಬೆಂಗಳೂರು ಕಂಬಳ: ಎಲ್ಲರ ಗಮನ ಸೆಳೆಯುತ್ತಿದ್ದಾರೆ 54 ವರ್ಷದ 'ಜಾಕಿ' ಗಂಗಯ್ಯ ಪೂಜಾರಿ!
ಶನಿವಾರ ಆರಂಭಗೊಳ್ಳಲಿರುವ ‘ಬೆಂಗಳೂರು ಕಂಬಳ ನಮ್ಮ ಕಂಬಳ’ಕ್ಕೆ ಅರಮನೆ ಮೈದಾನ ಸಕಲ ರೀತಿಯಲ್ಲಿ ಸಜ್ಜಾಗಿದೆ. ಕಂಬಳ ಎಂದರೆ ಕೋಣಗಳ ಓಟವಷ್ಟೇ ಅಲ್ಲ, ಜಿಂಕೆಯಂತೆ ಛಂಗನೆ ನೆಗೆದು ಓಡುವ ಅವುಗಳ ನಿಯಂತ್ರಕ ಓಟಗಾರರೂ (ಕಂಬಳದ ಜಾಕಿಗಳು) ಇದ್ದಾರೆ.

ಐತಿಹಾಸಿಕ ಬೆಂಗಳೂರು ಕಂಬಳಕ್ಕೆ ಅಧಿಕೃತ ಚಾಲನೆ: ಜೋಡು ಕೆರೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್
ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಂಬಳವನ್ನು ಆಯೋಜನೆ ಮಾಡಲಾಗಿದ್ದು, ಕಂಬಳ ಕೆರೆಗೆ ಯುವರತ್ನ ಡಾ. ಪುನಿತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನಿತ್ ರಾಜ್ಕುಮಾರ್ ಅವರು ದೀಪ ಬೆಳಗುವ ಮೂಲಕ ಕೋಣಗಳ ಓಟಕ್ಕೆ ಶನಿವಾರ ಚಾಲನೆ ನೀಡಿದರು.

ಬೆಂಗಳೂರು ಕಂಬಳಕ್ಕೆ ಬ್ರಿಜ್ ಭೂಷಣ್ ಸಿಂಗ್ ಬರುವುದಿಲ್ಲ: ಕಂಬಳ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ರೈ ಹೇಳಿದ್ದೇನು?
ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿರುವ ಕಂಬಳಕ್ಕೆ ಮೂಲತಃ ಕ್ರೀಡಾಪಟುವಾಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಆಯೋಜಕರು ಆಹ್ವಾನಿಸಿ ಆಹ್ವಾನ ಪತ್ರಿಕೆ ಸಹ ಮುದ್ರಣವಾಗಿತ್ತು.

ಬೆಂಗಳೂರಿನಲ್ಲಿ ಮೊದಲ ಕಂಬಳ ಆಯೋಜನೆ: ಭವ್ಯ ಮೆರವಣಿಗೆಯಲ್ಲಿ ಕೋಣಗಳ ಆಗಮನ
ಇದೇ ಮೊದಲ ಬಾರಿಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 25 ಮತ್ತು 26 ರಂದು ‘ಬೆಂಗಳೂರು ಕಂಬಳ ನಮ್ಮ ಕಂಬಳ' ಶೀರ್ಷಿಕೆಯಡಿ ಕಂಬಳವನ್ನು ಆಯೋಜಿಸಲಾಗಿದ್ದು, ಕಂಬಳಕ್ಕೆ ಭವ್ಯ ಮೆರವಣಿಗೆ ಮೂಲಕ ಕೋಣಗಳು ಆಗಮಿಸಲಿವೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಬುಧವಾರ ಮಾಹಿತಿ ನೀಡಿದರು.

ಬೆಂಗಳೂರು ಕಂಬಳ: ಐಶ್ವರ್ಯ ರೈ, ಅನುಷ್ಕಾ ಶೆಟ್ಟಿ ಭಾಗಿ!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆಯಲಿದ್ದು, ಬೆಂಗಳೂರು ಕಂಬಳಕ್ಕೆ ಕನಿಷ್ಠ 3 ರಿಂದ 5 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಕಂಬಲಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ ಎಂದು ಬೆಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಕೆ ಪ್ರಕಾಶ್ ಶೆಟ್ಟಿ ಅವರು ಹೇಳಿದ್ದಾರೆ.

