ವಿದೇಶಭ್ರಷ್ಟಾಚಾರ ಪ್ರಕರಣ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ 14 ವರ್ಷ, ಪತ್ನಿ ಬುಶ್ರಾಗೆ 7 ವರ್ಷ ಜೈಲು ಶಿಕ್ಷೆ
ದೇಶದ ಖಜಾನೆಗೆ 190 ಮಿಲಿಯನ್ ಪೌಂಡ್ಗಳಷ್ಟು ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) 2023ರ ಡಿಸೆಂಬರ್ನಲ್ಲಿ 72 ವರ್ಷದ ಇಮ್ರಾನ್ ಖಾನ್, 50 ವರ್ಷದ ಬುಶ್ರಾ ಬೀಬಿ ಮತ್ತು ಇತರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿತ್ತು.