ದೇಶಕಾಂಗ್ರೆಸ್ 'ಬುದ್ಧಿಹೀನ ಫ್ರೀಬಿ'ಗಳಿಂದ ಕರ್ನಾಟಕವನ್ನು ದಿವಾಳಿಯತ್ತ ತಳ್ಳುತ್ತಿದೆ: ತೇಜಸ್ವಿ ಸೂರ್ಯ
ಕಾಂಗ್ರೆಸ್ ಪಕ್ಷದ ನೀತಿಗಳು ರಾಜ್ಯವನ್ನು ದಿವಾಳಿತನಕ್ಕೆ ತಳ್ಳುತ್ತಿವೆ ಸಂಸದ ತೇಜಸ್ವಿ ಸೂರ್ಯ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಸರ್ಕಾರ ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳಿಂದ ಹಣವನ್ನು ಬುದ್ಧಿಹೀನ ಉಚಿತ ಕೊಡುಗೆಗಳಾದ ಗ್ಯಾರಂಟಿಗಳತ್ತ ತಿರುಗಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.