ದೇಶ'ಜೈಲಿನಿಂದ ಹೊರಬಂದ ಅಪರಾಧಿಗಳನ್ನು ಸನ್ಮಾನಿಸಿದ್ದು ಕೀಳು ಅಭಿರುಚಿಯನ್ನು ತೋರಿಸುತ್ತದೆ': ಬಿಲ್ಕಿಸ್ ಬಾನೋ ಪ್ರಕರಣದ ನ್ಯಾಯಾಧೀಶ
ಶಿಕ್ಷೆಗೆ ವಿನಾಯಿತಿ ನೀಡುವುದು ಸರ್ಕಾರದ ಅಧಿಕಾರದ ಮಿತಿಯೊಳಪಟ್ಟಿದೆ. ಆದರೆ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಜೈಲಿನಿಂದ ಹೊರಗೆ ಬಂದ ನಂತರ ಅವರನ್ನು ಅಭಿನಂದಿಸಿರುವ ರೀತಿ ಅಸಹ್ಯಕರವಾಗಿದೆ ಎಂದು 14 ವರ್ಷಗಳ ಹಿಂದೆ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು ಪ್ರತಿಕ್ರಿಯೆ ನೀಡಿದ್ದಾರೆ.