ಬಿಪರ್‌ಜಾಯ್

ಬಿಪರ್‌ಜಾಯ್ ಎಫೆಕ್ಟ್; ರಾಜ್ಯದಲ್ಲಿ ಶೇ 71ರಷ್ಟು ಮಳೆ ಕೊರತೆ, ಜೂನ್ 21ರಿಂದ ಎರಡು ವಾರ ಭಾರಿ ಮಳೆ ಸಾಧ್ಯತೆ!
ಕಳೆದ ವಾರ ಗುಜರಾತ್ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ ‘ಬಿಪರ್‌ಜಾಯ್’ ಕರ್ನಾಟಕದಲ್ಲಿ ನೈಋತ್ಯ ಮಾನ್ಸೂನ್ ಪ್ರಗತಿಯ ಮೇಲೆ ಪರಿಣಾಮ ಬೀರಿದೆ. ಐಎಂಡಿ ಪ್ರಕಾರ, ಜೂನ್ 1 ರಿಂದ ಕರ್ನಾಟಕದಲ್ಲಿ ಇದುವರೆಗೆ 34.3 ಮಿಮೀ ಮಳೆಯಾಗಿದ್ದು, ಸಾಮಾನ್ಯ ಮಳೆಯ 119.6 ಮಿಮೀ ವಿರುದ್ಧ ಶೇ 71 ರಷ್ಟು ಕೊರತೆಯಾಗಿದೆ.

ಇಂದು ದಕ್ಷಿಣ ರಾಜಸ್ಥಾನದತ್ತ ಬಿಪರ್‌ಜಾಯ್ ಚಂಡಮಾರುತ, ಭಾರಿ ಮಳೆಯಾಗುವ ಸಾಧ್ಯತೆ
'ಬಿಪರ್‌ಜಾಯ್' ಚಂಡಮಾರುತವು ಶುಕ್ರವಾರ ಬೆಳಿಗ್ಗೆ ಮತ್ತಷ್ಟು ದುರ್ಬಲಗೊಳ್ಳುವ ನಿರೀಕ್ಷೆಯಿದೆ ಮತ್ತು ಸಂಜೆ 'ಕಡಿಮೆ ಒತ್ತಡಕ್ಕೆ' ಒಳಗಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು ಬೆಳ್ಳಂಬೆಳಗ್ಗೆ ತಿಳಿಸಿದೆ.

ಬಿಪರ್‌ಜಾಯ್ ಚಂಡಮಾರುತ: ಸಂವಹನ ಮಾರ್ಗಗಳು ವಿಫಲವಾದರೆ ಎಚ್ಎಎಂ ರೇಡಿಯೋ ಬಳಕೆಗೆ ಅಧಿಕಾರಿಗಳು ಮುಂದು
ಶಕ್ತಿಶಾಲಿ ಚಂಡಮಾರುತ ಬಿಪರ್‌ಜಾಯ್ ಗುರುವಾರ ಸಂಜೆ ಗುಜರಾತ್ ಕರಾವಳಿ ಮೇಲೆ ಅಪ್ಪಳಿಸಲಿರುವುದರಿಂದ ಗಂಟೆಗೆ 140 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಸಂವಹನ ಜಾಲಗಳ ಮೇಲೆ ಹಾನಿಯುಂಟುಮಾಡುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ, ಸುಗಮ ಮಾಹಿತಿ ವಿನಿಮಯಕ್ಕಾಗಿ ಅಧಿಕಾರಿಗಳು ಎಚ್ಎಎಂ (ಹವ್ಯಾಸಿ) ರೇಡಿಯೋದತ್ತ ಮುಖ ಮಾಡಿದ್ದಾರೆ.

