ರಾಜ್ಯಲೋಕೋಪಯೋಗಿ ಇಲಾಖೆಯ 373 ಗುತ್ತಿಗೆಗಳಲ್ಲಿ ಶೇ.75ರಷ್ಟು ಕಾಮಗಾರಿಗಳನ್ನು ಒಬ್ಬರು, ಇಬ್ಬರು ಬಿಡ್ಡರ್ಗಳಿಗೆ ನೀಡಲಾಗಿದೆ: ಸಿಎಜಿ
ಗುತ್ತಿಗೆದಾರರಿಗೆ ಕಾಮಗಾರಿ ನೀಡುವಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ನಡುವೆಯೇ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯುಡಿ) 2016ರಿಂದ 2021ರ ಅವಧಿಯಲ್ಲಿ ನಡೆದಿರುವ ‘ರಸ್ತೆ ಕಾಮಗಾರಿಗಳ ಯೋಜನೆ ಮತ್ತು ಗುತ್ತಿಗೆ ನಿರ್ವಹಣೆ’ಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವುದನ್ನು ಮಹಾ ಲೇಖಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ.