ರಾಜ್ಯ108 ಆಂಬ್ಯುಲೆನ್ಸ್: ಸೇವಾ ಸಂಸ್ಥೆ ಬದಲಾಯಿಸಲು ಟೆಂಡರ್, ಬಿಡ್ ದಾರರೇ ಇಲ್ಲ!
ರೋಗಿಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸುವ '108 ಆಂಬ್ಯುಲೆನ್ಸ್' ಸೇವೆ ನೀಡಲು ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿ ಬದಲಾಯಿಸಲು ಈವರೆಗೂ ಕರೆಯಲಾದ ಟೆಂಡರ್ ನಲ್ಲಿ ಯಾವುದೇ ಬಿಡ್ ದಾರರು ಬಿಡ್ ಸಲ್ಲಿಸದ ಕಾರಣ ರಾಜ್ಯ ಸರ್ಕಾರದ ಕ್ರಮಗಳು ಹೆಚ್ಚಿನ ಪ್ರಗತಿ ಕಂಡಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.