ರಾಜ್ಯಸಮುದಾಯ ಸೌಕರ್ಯ ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಮುಂದು: ಬಡ್ಡಿ ದರ ಕಡಿತ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲು ನಗರದಾದ್ಯಂತ ಇರುವ ಸಮುದಾಯ ಸೌಕರ್ಯ ನಿವೇಶನಗಳನ್ನು 30 ವರ್ಷಗಳ ಕಾಲ ಭೋಗ್ಯಕ್ಕೆ ಪಡೆದುಕೊಂಡವರಿಗೆ ಮಾರಾಟ ಮಾಡಲಾಗುವುದು. ಭೋಗ್ಯಕ್ಕೆ ಅಷ್ಟು ವರ್ಷಗಳ ಕಾಲ ಇದ್ದವರು ತಮಗೆ ಬೇಕೆಂದರೆ ಅಂತಹ ನಿವೇಶನಗಳನ್ನು ಖರೀದಿಸಬಹುದು ಎಂದು ಬಿಡಿಎ ಆಯುಕ್ತ ಹೆಚ್ ಆರ್ ಮಹದೇವ್ ತಿಳಿಸಿದ್ದಾರೆ.