ಬಿಗ್‌ಬಾಸ್ ಕನ್ನಡ

ಬಿಗ್‌ಬಾಸ್‌ಗೆ ಹೋಗುವ ಸ್ಟಾರ್ ನಟ-ನಟಿಯರಿಗೆ ಶಾಕ್: 3 ವರ್ಷ ಸೀರಿಯಲ್‌ಗಳಿಂದ ಬ್ಯಾನ್ ಮಾಡಲು ನಿರ್ಮಾಪಕರ ಸಂಘ ನಿರ್ಧಾರ!
ಚಾಲ್ತಿಯಲ್ಲಿರುವ ಧಾರಾವಾಹಿಯ ಮುಖ್ಯ ನಟ-ನಟಿಯರು ನಿರ್ಮಾಪಕರಿಗೆ ತಿಳಿಸದೆ ದಿಢೀರನೆ ಬಿಗ್ ಬಾಸ್ ಶೋಗೆ ಹೋದರೆ, ಅವರನ್ನು 2 ರಿಂದ 3 ವರ್ಷಗಳ ಕಾಲ ಸೀರಿಯಲ್‌ಗಳಿಂದ ಬ್ಯಾನ್ ಮಾಡಲು ಕಿರುತೆರೆ ನಿರ್ಮಾಪಕರ ಸಂಘ ನಿರ್ಧರಿಸಿದೆ. ಆ ಕುರಿತ ವರದಿ ಇಲ್ಲಿದೆ:
'ಡೆವಿಲ್' ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಗಿಲ್ಲಿ ನಟ; ಸಸ್ಪೆನ್ಸ್ ಥ್ರಿಲ್ಲರ್ 'ಸರ್ಕಾರಿ ಶಾಲೆ-ಎಚ್ 8' ರಲ್ಲಿ ಪ್ರಮುಖ ಪಾತ್ರ!
ಈ ಚಿತ್ರದ ಪೋಸ್ಟರ್ ಅನ್ನು ಇತ್ತೀಚೆಗೆ ಗಿಲ್ಲಿ ನಟ ಅವರ ಪೋಷಕರು ಮಳವಳ್ಳಿ ತಾಲ್ಲೂಕಿನ ದಡದಪುರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಅನಾವರಣಗೊಳಿಸಿದರು.

'ಮಂಗಳಾಪುರಂ'ನಲ್ಲಿ ರಿಷಿಗೆ ಬಿಗ್ ಬಾಸ್ ಕನ್ನಡ ಖ್ಯಾತಿಯ ನಟಿ ಗೌತಮಿ ಜಾದವ್ ಜೋಡಿ!
ವಾರಾಹಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ವಿದ್ವಾನ್ ಪ್ರಸನ್ನ ತಂತ್ರಿ ಮತ್ತು ರಾಮ್ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Bigg Boss Kannada 11: ರಂಜಿತ್-ಜಗದೀಶ್ ಎಲಿಮಿನೇಷನ್ ಬೆನ್ನಲ್ಲೇ Wildcard entry; ಯಾರಿವನು?
ಕಳೆದೊಂದು ವಾರದಿಂದ ಜಗಳ ಮತ್ತು ಎಲಿಮಿನೇಷನ್ ನಿಂದಾಗಿ ಸುದ್ದಿಗೆ ಗ್ರಾಸವಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮದಲ್ಲಿ ಇದೀಗ ಮತ್ತೊಂದು ಟ್ವಿಸ್ಟ್ ದೊರೆತ್ತಿದ್ದು, ಖ್ಯಾತ ಉದಯೋನ್ಮುಖ ಗಾಯಕ ಹಾಗೂ ಪಕ್ಕಾ ಗ್ರಾಮೀಣ ಪ್ರತಿಭೆಯನ್ನು ಬಿಗ್ ಹೌಸ್ ಗೆ ಕಳುಹಿಸಲಾಗಿದೆ.

Bigg Boss Kannada: ಜಗದೀಶ್ ಮೇಲೆ ಹಲ್ಲೆ ಮಾಡಿಲ್ಲ.. ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆಯಾದಾಗ ರಕ್ಷಣೆಗೆ ನಿಂತೆ ಅಷ್ಟೇ- ರಂಜಿತ್!
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ರಂಜಿತ್, 'ಜಗದೀಶ್ ಮೇಲೆ ನಾನು ಹಲ್ಲೆ ಮಾಡಿಲ್ಲ. ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆಯಾದಾಗ ರಕ್ಷಣೆಗೆ ನಿಂತೆ ಅಷ್ಟೇ ಎಂದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

Bigg Boss Kannada: ಸುದೀಪ್ ಗೆ ಮಾತೃವಿಯೋಗ; ಸುದ್ದಿಗೋಷ್ಟಿ ರದ್ದು ಮಾಡಿದ ಜಗದೀಶ್!
ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ಬಳಿಕ ವಿಡಿಯೋ ಮಾಡಿದ್ದ ಜಗದೀಶ್ ಇಂದು ಸಂಜೆ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದರು. ಆದರೆ ನಟ ಹಾಗೂ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರ ತಾಯಿ ವಿಧಿವಶವಾಗಿರುವ ಕಾರಣ ತಮ್ಮ ಪತ್ರಿಕಾಗೋಷ್ಠಿಯನ್ನು ಅವರು ರದ್ದು ಮಾಡಿದ್ದಾರೆ.

Bigg Boss Kannada: ಮತ್ತೆ ಬರ್ತಾರಾ ಲಾಯರ್ ಜಗದೀಶ್?; 'ಮುಗಿದು ಹೋದ ಅಧ್ಯಾಯ' ಎಂದ Kichcha Sudeep
ಜಗದೀಶ್ ಅವರನ್ನು ಸ್ವತಃ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಿದ್ದಾರೆ. ಇದೀಗ ಮತ್ತೆ ಜಗದೀಶ್ ಅವರನ್ನು ಮನೆಗೆ ವಾಪಸ್ ಕರೆಸುವ ಕುರಿತು ಚರ್ಚೆಗಳು ನಡೆಯುತ್ತಿದೆ.

