ಸಿನಿಮಾ ಸುದ್ದಿ'ನಾತಿಚರಾಮಿ'ಗೆ 5 ರಾಷ್ಟ್ರಪ್ರಶಸ್ತಿ: ನಿರ್ಮಾಪಕ ಲಿಂಗದೇವರು ವಿರುದ್ಧ ಶೀಘ್ರ ತನಿಖೆಗೆ ಹೈಕೋರ್ಟ್ ಆದೇಶ
ಕನ್ನಡದ ‘ನಾತಿಚರಾಮಿ’ ಚಲನಚಿತ್ರಕ್ಕೆ 2018ನೇ ಸಾಲಿನಲ್ಲಿ 5 ರಾಷ್ಟ್ರ ಪ್ರಶಸ್ತಿ ದೊರೆತ ವಿವಾದಕ್ಕೆ ಸಂಬಂಧಿಸಿದಂತೆ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರಾಗಿದ್ದ ಬಿ.ಎಸ್.ಲಿಂಗದೇವರು ವಿರುದ್ಧದ ಆರೋಪಗಳ ಬಗ್ಗೆ ಶೀಘ್ರದಲ್ಲೇ ವಿಚಾರಣೆ ಪೂರ್ಣಗೊಳಿಸಿ ಅಗತ್ಯ ಕ್ರಮ ಜರುಗಿಸುವಂತೆ ಚಲನಚಿತ್ರೋತ್ಸವ ನಿರ್ದೇಶನಾಲಯಕ್ಕೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.