ರಾಜ್ಯವಾಹನ ಚಾಲನೆ ಒಂದು ಕಲೆ, ಕೌಶಲ್ಯ ಮಾತ್ರವಲ್ಲ ಜವಾಬ್ದಾರಿ ಕೂಡ; ಎಚ್ಚರ ತಪ್ಪಿದರೆ ಜೀವಕ್ಕೆ ಮಾರಕ ಎಂದು ತೋರಿಸಿದ B-MACH
ಕಳೆದ ಜನವರಿಯಿಂದ 118 ಕಿಲೋ ಮೀಟರ್ ಉದ್ದದ ದಶಪಥ ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿ(B-MACH)ಯಲ್ಲಿ ಸಂಚರಿಸುವಾಗ ಅಪಘಾತಕ್ಕೀಡಾಗಿ ಇಲ್ಲಿಯವರೆಗೆ ಸುಮಾರು 140 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಮಾರ್ಚ್ 12ರಂದು ಉದ್ಘಾಟಿಸಿ ಹೋಗಿದ್ದರು.