ರಾಜ್ಯಬಾಗಲಕೋಟೆ, ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲು
ಶನಿವಾರ ಬೆಳ್ಳಂಬೆಳಗ್ಗೆ ಬಾಗಲಕೋಟೆ ಮತ್ತು ವಿಜಯಪುರ ಜನತೆ ಭೂಮಿ ಕಂಪಿಸಿ ಭೀತಿಗೊಳಗಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಸಮೀಪ 10 ಕಿಲೋ ಮೀಟರ್ ಆಳದಲ್ಲಿ ಕಂಪನದ ಕೇಂದ್ರವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.