ಬಾಕ್ಸ್ ಆಫೀಸ್ ಕಲೆಕ್ಷನ್ಸ್

ಬಾಕ್ಸ್ ಆಫೀಸ್‌ನಲ್ಲಿ 'ಅನಿಮಲ್' ಸುನಾಮಿ; ಬಿಡುಗಡೆಯಾದ ಮೂರೇ ದಿನಕ್ಕೆ 356 ಕೋಟಿ ರೂ. ಗಳಿಕೆ!
ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 356 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಚಿತ್ರತಂಡ ಸೋಮವಾರ ತಿಳಿಸಿದೆ. ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಅನಿಮಲ್ ಚಿತ್ರವು ಶುಕ್ರವಾರ (ಡಿಸೆಂಬರ್ 1) ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

2 ದಿನದಲ್ಲಿ 236 ಕೋಟಿ ರೂ. ಗಳಿಕೆ; ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡ ರಣಬೀರ್ ಕಪೂರ್-ರಶ್ಮಿಕಾ ಅಭಿನಯದ 'ಅನಿಮಲ್'
ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ "ಅನಿಮಲ್" ಚಿತ್ರ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 236 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಚಿತ್ರತಂಡ ಭಾನುವಾರ ತಿಳಿಸಿದೆ.

