ರಾಜ್ಯಸಚಿವ ಎಂಟಿಬಿ ನಾಗರಾಜ್ ಸೇರಿದಂತೆ ಇತರರಿಂದ ನೀರಿನ ಬಿಲ್ ಬಾಕಿ; ಒಟ್ಟು 19 ಕೋಟಿ ರೂ. ವಸೂಲಿ!
ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ನೋಟಿಸ್ ಜಾರಿ ಮಾಡಿದ ನಂತರ ಮತ್ತು ಬಿಡಬ್ಲ್ಯುಎಸ್ಎಸ್ಬಿ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಿದ ಬಳಿಕ ಕಳೆದ ಐದು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಸುಸ್ತಿದಾರರಿಂದ 19.35 ಕೋಟಿ ರೂ. ನೀರಿನ ಬಿಲ್ಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ವಸೂಲಿ ಮಾಡಿದೆ.