ವಾಣಿಜ್ಯಸತತ ಮೂರನೇ ದಿನವು ಏರುಗತಿ: ಸೆನ್ಸೆಕ್ಸ್ 790 ಅಂಕ ಏರಿಕೆ, 50,000 ಮಟ್ಟದ ಸನಿಹದಲ್ಲಿ
ಬ್ಯಾಂಕಿಂಗ್, ಹಣಕಾಸು, ದೂರಸಂಪರ್ಕ, ಆಟೋ ಮತ್ತು ಗ್ರಾಹಕ ವಸ್ತು ಷೇರುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಬುಧವಾರ ಸತತ ಮೂರನೇ ದಿನವೂ ಏರುಗತಿ ದಾಖಲಿಸಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ 789.70 ಏರಿಕೆ ಕಂಡು 49,733.84 ಕ್ಕೆ ತಲುಪಿದೆ.