ರಾಜ್ಯಶಕ್ತಿ ಯೋಜನೆ; ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ಟಿಕೆಟ್ ಮೌಲ್ಯ ಪಾವತಿಗೆ ಸರ್ಕಾರ ನಿರ್ಧಾರ
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆ ಪ್ರಾರಂಭವಾದ ಸುಮಾರು ಎರಡು ತಿಂಗಳ ನಂತರ, ರಾಜ್ಯ ಸರ್ಕಾರವು ಕೆಎಸ್ಆರ್ಟಿಸಿ, ಕೆಕೆಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ ಮತ್ತು ಬಿಎಂಟಿಸಿ ನಿಗಮಗಳಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ಯೋಜನೆಯ ಟಿಕೆಟ್ ಮೌಲ್ಯವನ್ನು ಮರುಪಾವತಿಸಲು ನಿರ್ಧರಿಸಿದೆ.