ರಾಜ್ಯಸುಳ್ಯ: ಬಲವಂತದ ಜೀತದಾಳಾಗಿ ದುಡಿಯುತ್ತಿದ್ದ ಏಳು ಬಾಲ ಕಾರ್ಮಿಕರ ರಕ್ಷಣೆ
ಶುಕ್ರವಾರ ರಾತ್ರಿ ಸುಳ್ಯದಲ್ಲಿ ನಡೆದ ದಾಳಿಯಲ್ಲಿ ಬಲವಂತದಿಂದ ಜೀತದಾಳಾಗಿ ಮಾಡಿಕೊಂಡಿದ್ದ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಳು ಮಕ್ಕಳನ್ನು ರಕ್ಷಿಸಲಾಗಿದೆ. ಕಾರ್ಮಿಕ ಇಲಾಖೆ ಮತ್ತು ಮಕ್ಕಳ ರಕ್ಷಣಾ ಘಟಕದಿಂದ ಸುಳ್ಯ ತಾಲ್ಲೂಕಿನ ಪಂಜ ಗ್ರಾಮದ ಕರಿಕಾಲದಲ್ಲಿ ಈ ದಾಳಿ ನಡೆದಿದೆ.