ದೇಶತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಗೆ ಕೊರೋನಾ ಪಾಸಿಟಿವ್: ನಕಲಿ ಸುದ್ದಿ ಬರೆದಿದ್ದ ಪತ್ರಕರ್ತನ ಬಂಧನ
ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಕೊರೋನೋ ಸೋಂಕು ತಗುಲಿದೆ ಎಂಬ ಸುಳ್ಳು ಸುದ್ದಿ ಬರೆದಿದ್ದ ಹಿನ್ನೆಲೆಯಲ್ಲಿ ಜುಬಿಲಿ ಹಿಲ್ಸ್ ಪೊಲೀಸರು ಸ್ಥಳೀಯ ದಿನಪತ್ರಿಕೆ ‘ಆದಾಬ್ ಹೈದರಾಬಾದ್’ನಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಅನಮ್ಚಿನ್ನಿ ವೆಂಕಟೇಶ್ವರ ರಾವ್ ಅವರನ್ನು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದಾರೆ.