ಫೈಜರ್

ಕೋವಿಡ್ ಬೂಸ್ಟರ್ ಲಸಿಕೆ ಓಮಿಕ್ರಾನ್ ವಿರುದ್ಧ ರಕ್ಷಣೆ ನೀಡುತ್ತದೆ: ಫೈಜರ್
ಆರಂಭಿಕ ಎರಡು ಡೋಸ್‌ಗಳು ಗಮನಾರ್ಹವಾಗಿ ಕಡಿಮೆ ಪರಿಣಾಮಕಾರಿಯಾಗಿ ಕಂಡುಬಂದರೂ ಸಹ ತನ್ನ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಹೊಸ ಓಮಿಕ್ರಾನ್ ರೂಪಾಂತರದಿಂದ ರಕ್ಷಿಸಬಹುದು ಎಂದು ಫೈಜರ್ ಬುಧವಾರ ಹೇಳಿದೆ.

ಭಾರತದಲ್ಲಿ ಕೋವಿಡ್ ಲಸಿಕೆ ಲೈಸೆನ್ಸ್ ಗಾಗಿ ಫೈಜರ್, ಜಾನ್ಸನ್ ಅಂಡ್ ಜಾನ್ಸನ್ ಇನ್ನೂ ಅರ್ಜಿ ಸಲ್ಲಿಸಿಲ್ಲ: ಮೂಲಗಳು
ತಮ್ಮ ಕೋವಿಡ್ ಲಸಿಕೆ ತುರ್ತು ಬಳಕೆಯ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸುವಂತೆ ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿ(ಡಿಸಿಜಿಐ) ಫೈಜರ್, ಜಾನ್ಸನ್ ಅಂಡ್ ಜಾನ್ಸನ್‌ಗೆ ಎರಡೆರಡು ಬಾರಿ ಪತ್ರ ಬರೆಯುವ ಮೂಲಕ ಒತ್ತಾಯಿಸಿದೆ.

'3ನೇ ಅಥವಾ ಬೂಸ್ಟರ್ ಡೋಸ್ ಲಸಿಕೆ ಗೆ ಇದು ಸಮಯ' ಎಂದ ಫೈಜರ್ ಸಂಸ್ಥೆ; ಆತುರ ಬೇಡ ಎಂದ ಅಮೆರಿಕ ಸರ್ಕಾರ!
ಅಮೆರಿಕದ ಖ್ಯಾತ ಔಷಧ ತಯಾರಿಕಾ ಸಂಸ್ಥೆ ಫೈಜರ್ ಮೂರನೇ ಡೋಸ್ ಲಸಿಕೆಗೆ ಮುಂದಾಗಿದ್ದು, ಈ ಸಂಬಂಧ ಅಮೆರಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.

ಮುಂದಿನ ವರ್ಷ ಮಾಡೆರ್ನಾ ಸಂಸ್ಥೆಯಿಂದ ಸಿಂಗಲ್ ಡೋಸ್ ಕೋವಿಡ್ ಲಸಿಕೆ; 2021ಕ್ಕೆ 5 ಕೋಟಿ ಲಸಿಕೆ ಸಿದ್ಧ ಎಂದ ಫೈಜರ್!
ದೇಶದಲ್ಲಿ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಮುಂದುವರೆದಿರುವಂತೆಯೇ ಕೋವಿಡ್ ಲಸಿಕೆಗೆ ವ್ಯಾಪಕ ಬೇಡಿಕೆ ಮತ್ತು ಕೊರತೆ ಎದುರಾಗಿದ್ದು, ಇದನ್ನು ನೀಗಿಸುವ ನಿಟ್ಟಿನಲ್ಲಿ ವಿದೇಶ ಲಸಿಕಾ ತಯಾರಿಕಾ ಸಂಸ್ಥೆಗಳಾದ ಮಾಡೆರ್ನಾ ಮತ್ತು ಫೈಜರ್ ಸಂಸ್ಥೆಗಳು ಲಸಿಕೆ ವಿತರಣೆಗೆ ಮುಂದಾಗಿವೆ.

ದೆಹಲಿ ಸರ್ಕಾರಕ್ಕೆ ನೇರವಾಗಿ ಕೋವಿಡ್ ಲಸಿಕೆ ಮಾರಾಟ ಮಾಡಲು ಫೈಜರ್, ಮಾಡೆರ್ನಾ ನಿರಾಕರಣೆ!
ಅಮೆರಿಕದ ಔಷಧಿ ತಯಾರಕ ಸಂಸ್ಥೆಗಳಾದ ಫೈಜರ್ ಮತ್ತು ಮಾಡೆರ್ನಾ ಕೇಂದ್ರದ ಜೊತೆ ನೇರವಾಗಿ ವ್ಯವಹರಿಸಲು ಬಯಸಿದ್ದರಿಂದ ಕೊರೋನಾ ವೈರಸ್ ಲಸಿಕೆಗಳನ್ನು ನೇರವಾಗಿ ದೆಹಲಿ ಸರ್ಕಾರಕ್ಕೆ ಮಾರಾಟ ಮಾಡಲು ನಿರಾಕರಿಸಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಹೇಳಿದ್ದಾರೆ.

ಭಾರತದ ಕೊರೋನಾ ಸೋಂಕಿಗೆ ಅಮೆರಿಕ ಲಸಿಕೆ ಅತ್ಯಂತ ಪರಿಣಾಮಕಾರಿ ಮದ್ದು!
ಅಮೆರಿಕದಲ್ಲಿ ಪ್ರಸ್ತುತ ಕೊರೋನಾ ನಿಗ್ರಹಕ್ಕಾಗಿ ಬಳಕೆಯಾಗುತ್ತಿರುವ ಫೈಜರ್ ಮತ್ತು ಮೆಡೆರ್ನಾ ಲಸಿಕೆಗಳು ಭಾರತದಲ್ಲಿ ಕಾಣಿಸಿಕೊಂಡ ರೂಪಾಂತರಿ ಹೊಸ ಕೊರೋನಾ ಸೋಂಕು ಪ್ರಬೇದವನ್ನು ಪರಿಣಾಮಕಾರಿಯಾಗಿ ಎದುರಿಸುವ ಶಕ್ತಿ ಹೊಂದಿವೆ.

