ಫುಡ್ ಡೆಲಿವರಿ

ಫುಡ್ ಡೆಲಿವರಿ ಉದ್ಯೋಗದಿಂದ ಪದಕ ಗೆಲ್ಲುವವರೆಗೆ...: ವಿಶೇಷ ಚೇತನ ವ್ಯಕ್ತಿಯ ಮಾದರಿ ಬದುಕು...
ಕುಟುಂಬದ ಬೆಂಬಲಕ್ಕೆ ನಿಲ್ಲಲು ಆರ್ಥಿಕವಾಗಿ ಸಹಾಯ ಮಾಡುತ್ತಿದ್ದಾರೆ. ಮನೆಯಲ್ಲಿ ಪತ್ನಿ ಮತ್ತು ಅನಾರೋಗ್ಯ ಹೊಂದಿದ ತಾಯಿ ಇದ್ದಾರೆ. ಕ್ರೀಡೆಯಲ್ಲಿ ಅವರ ಕನಸುಗಳ ಅನ್ವೇಷಣೆಯೊಂದಿಗೆ ಜೀವನದ ಕಠಿಣ ವಾಸ್ತವಗಳನ್ನು ಅರಿತು ಸಮತೋಲನದಿಂದ ಜೀವನ ಸಾಗಿಸುತ್ತಿದ್ದಾರೆ.

ಚುನಾವಣೆ ನೀತಿಸಂಹಿತೆ ಜಾರಿ: ಉಡುಗೊರೆ ವಿತರಣೆಗೆ ರಾಜಕೀಯ ಪಕ್ಷಗಳಿಂದ ಫುಡ್ ಡೆಲಿವರಿ ಸಂಸ್ಥೆ, ಮಕ್ಕಳ ಬಳಕೆ!
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಓಲೈಸಲು ಮದ್ಯ, ನಗದು, ಉಡುಗೊರೆ ಮತ್ತು ಇತರೆ ವಸ್ತುಗಳನ್ನು ನೀಡಲು ರಾಜಕೀಯ ಪಕ್ಷಗಳು ನವೀನ ಮಾರ್ಗಗಳನ್ನು ಕಂಡು ಕೊಂಡಿದ್ದು, ಆಹಾರ ವಿತರಕ ಸಂಸ್ಥೆ, ಮಕ್ಕಳ ಬಳಕೆ ಮಾಡಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ.

ಕರಾವಳಿ ಜಿಲ್ಲೆಗಳಲ್ಲಿ ಡ್ರಗ್ ಪ್ರಕರಣ: ತನಿಖೆಯಲ್ಲಿ ಆಘಾತಕಾರಿ ವಿಚಾರ; ಫುಡ್ ಡೆಲಿವರಿ ಮೂಲಕ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ
ಕರಾವಳಿ ಕರ್ನಾಟಕದ ವೈದ್ಯಕೀಯ, ಇತರ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಒಳಗೊಂಡಿರುವ ಡ್ರಗ್ಸ್ ಪ್ರಕರಣದ ತನಿಖೆಯು ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದೆ. ಆನ್‌ಲೈನ್ ಫುಡ್ ಡೆಲಿವರಿಗಳ ಮೂಲಕ ವಿದ್ಯಾರ್ಥಿಗಳ ಕೊಠಡಿಗಳಿಗೆ ಈ ಪದಾರ್ಥಗಳು ಪ್ರವೇಶಿಸಿವೆ ಮತ್ತು ವಾಚ್ ವಿವರಣೆ ಟ್ಯಾಗ್‌ಗಳ ರೂಪದಲ್ಲಿ ಎಲ್‌ಎಸ್‌ಡಿಯನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ವಿಗ್ಗಿಯಲ್ಲಿ ಅತೀ ಹೆಚ್ಚು ವ್ಯಯಿಸಿದ ಬೆಂಗಳೂರಿಗರು: ಹಣ್ಣು, ಮಾಂಸ, ಐಸ್ ಕ್ಯೂಬ್ ಅತೀ ಹೆಚ್ಚು ಆರ್ಡರ್ ಮಾಡಿದ ತಿನಿಸುಗಳು!
ಆನ್‌ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ 2022ರ ವಾರ್ಷಿಕ ಪಟ್ಟಿಯ 7ನೇ ಆವೃತ್ತಿ 'ಹೌ ಇಂಡಿಯಾ ಸ್ವಿಗ್ಗಿ ಡಿ 2022'ರನ್ನು ಬಿಡುಗಡೆ ಮಾಡಿದ್ದು, ಸಮೀಕ್ಷೆಯಲ್ಲಿ ಆಹಾರ ಮತ್ತು ಇತರ ಅಗತ್ಯ ವಸ್ತುಗಳಿಗೆ ಅತಿ ಹೆಚ್ಚು ಆರ್ಡರ್ ಮಾಡಿದ ಪ್ರಮುಖ ಮೂರು ಭಾರತೀಯ ನಾಗರಿಕರಲ್ಲಿ ಬೆಂಗಳೂರಿಗರು ಸೇರಿದ್ದಾರೆಂಬುದು ತಿಳಿದುಬಂದಿದೆ.

ಫುಡ್ ಡೆಲಿವರಿ ಬಾಯ್ ವೇಷದಲ್ಲಿ ಡ್ರಗ್ಸ್ ಮಾರಾಟ; ಖತರ್ನಾಕ್ ಪೆಡ್ಲರ್ ಪೊಲೀಸ್ ವಶಕ್ಕೆ
ಆಹಾರ ಸರಬರಾಜು ಮಾಡುವ ನೆಪದಲ್ಲಿ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಉಡುಪಿಯ ಖತರ್ನಾಕ್ ಡ್ರಗ್ಸ್ ದಂಧೆಕೋರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಎಲ್ಲಿದ್ದರೇನು? 'ಕಾಯಕ ಕಾಯಕವೇ': ಅಫ್ಘಾನ್ ಮಾಜಿ ಮಂತ್ರಿ ಈಗ ಜರ್ಮನಿಯಲ್ಲಿ ಫುಡ್ ಡೆಲಿವರಿ ಬಾಯ್!
ತಾಲಿಬಾನಿಗಳು ಈಗ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಒಮ್ಮೆ ಅಫ್ಘಾನಿಸ್ತಾನದಲ್ಲಿ ಮಂತ್ರಿಯಾಗಿದ್ದ ಸೈಯದ್ ಸದಾತ್ ಅವರು ಅಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ಹುದ್ದೆ ತೊರೆದಿದ್ದು ಇದೀಗ ಜರ್ಮನಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.

ವೇತನಕ್ಕೆ ಕತ್ತರಿ ಹಾಕಿದ ಜೊಮ್ಯಾಟೋ: ಕಂಪನಿ ವಿರುದ್ಧ ತಿರುಗಿಬಿದ್ದ ಡೆಲಿವರಿ ಬಾಯ್ಸ್
ವೇತನ ಹಾಗೂ ಪ್ರೋತ್ಸಾಹ ಧನವನ್ನು ಕಡಿಮೆ ಮಾಡಿದ ಹಿನ್ನಲೆಯಲ್ಲಿ ಜೊಮ್ಯಾಟೋ ಕಂಪನಿ ವಿರುದ್ಧ ಡೆಲಿವರಿ ಬಾಯ್ಸ್ ಗಳು ತಿರುಗಿ ಬಿದ್ದಿದ್ದಾರೆ.

