ರಾಜ್ಯಪ್ರವಾಸಿಗರಿಗೆ ಗುಣಮಟ್ಟದ ಆಹಾರ ಒದಗಿಸಲು KSTDC ಮಾಸ್ಟರ್ಪ್ಲಾನ್: ನವೆಂಬರ್ನಿಂದ 'ಮಯೂರ ರುಚಿ ಆನ್ ವೀಲ್ಸ್' ಸೇವೆ ಆರಂಭ..!
ಲೈವ್ ಕಿಚನ್ ಹೊಂದಿರುವ, ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನಗಳನ್ನು ನಿರ್ವಹಿಸಲು ಈ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿರುವವರನ್ನು ಆಯ್ಕೆ ಮಾಡಲಾಗುತ್ತದೆ. ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳುವುದರ ಜತೆಗೆ ತ್ವರಿತ ಸೇವೆ ನೀಡುವುದು ಉದ್ದೇಶ.