ಅಂಕಣಗಳುಫಿಶರ್ ಮತ್ತು ಫಿಸ್ತುಲಾ ಆರೋಗ್ಯ ಸಮಸ್ಯೆ: ಲಕ್ಷಣಗಳು, ಆಹಾರ ಪದ್ಧತಿ ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಫಿಶರ್ (ಬಿರುಕು) ಮತ್ತು ಫಿಸ್ತುಲಾಗಳು ಪ್ರಮುಖವಾಗಿವೆ. ಇದಕ್ಕೆ ಇಂದಿನ ಜಡಜೀವನಶೈಲಿ ಮತ್ತು ಸರಿಯಿಲ್ಲದ ಆಹಾರ ಪದ್ಧತಿಗಳು ಮುಖ್ಯ ಕಾರಣಗಳಾಗಿವೆ. ಹಲವಾರು ಜನರು ಫಿಶರ್, ಫಿಸ್ತುಲಾ ಮತ್ತು ಪೈಲ್ಸ್ ಗಳು ಒಂದೇ ಎಂದು ತಿಳಿದಿದ್ದಾರೆ.