ದೇಶಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಫಾರೂಖ್ ಬಂಧನ: ಕಾಂಗ್ರೆಸ್ ಖಂಡನೆ
ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರನ್ನು ಬಂಧಿಸಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ದೇಶದ ಏಕತೆ ಹಾಗೂ ಸಮಗ್ರತೆಗಾಗಿ ಹೋರಾಡಿದ ಇಂತಹ ನಾಯಕರನ್ನು ಬಂಧಿಸಿರುವುದು ದುರದೃಷ್ಟ ಎಂದು ಕಾಂಗ್ರೆಸ್ ಹೇಳಿದೆ.