ರಾಜ್ಯವಂಟಮುರಿ ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ: ಓಡಿಹೋಗಿದ್ದ ಜೋಡಿ ಕೊನೆಗೂ ವಿವಾಹ
2023 ರ ಡಿಸೆಂಬರ್ 11 ರಂದು ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಜನರ ಗುಂಪೊಂದು ಮಹಿಳೆಯನ್ನು ವಿವಸ್ತ್ರಗೊಳಿಸಿ, ಥಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ ಅಮಾನವೀಯ ಘಟನೆಗೆ ಕಾರಣವಾಗಿದ್ದ ಪ್ರೇಮಿಗಳು ಕೊನೆಗೂ ಮಂಗಳವಾರ ಅಧಿಕೃತವಾಗಿ ಮದುವೆಯಾಗಿದ್ದಾರೆ.