ಪ್ರೇಮಲೋಕ 2

ರವಿಚಂದ್ರನ್ ನಿರ್ದೇಶನದ 'ಪ್ರೇಮಲೋಕ 2' ಚಿತ್ರಕ್ಕೆ ತೇಜು ಅಶ್ವಿನಿ ನಾಯಕಿ?
ಸಿನಿಮಾ ಸುದ್ದಿ

ರವಿಚಂದ್ರನ್ ನಿರ್ದೇಶನದ 'ಪ್ರೇಮಲೋಕ 2' ಚಿತ್ರಕ್ಕೆ ತೇಜು ಅಶ್ವಿನಿ ನಾಯಕಿ?

ಪ್ರೇಮಲೋಕ (1987) ಸೂಪರ್‌ಹಿಟ್ ಸಿನಿಮಾ ನಿರ್ದೇಶಕ ಮತ್ತು ನಟ ರವಿಚಂದ್ರನ್ ಇದೀಗ 'ಪ್ರೇಮಲೋಕ 2' ಮೂಲಕ ಇತಿಹಾಸವನ್ನು ಮರುಸೃಷ್ಟಿಸಲು ಸಜ್ಜಾಗುತ್ತಿದ್ದಾರೆ. ಈಮಧ್ಯೆ, ಚಿತ್ರದ ನಾಯಕಿ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ನಾಯಕಿಯರ ಆಯ್ಕೆಗೆ ಹೆಸರುವಾಸಿಯಾಗಿರುವ ರವಿಚಂದ್ರನ್ ಅವರು ಕನ್ನಡ ಚಿತ್ರರಂಗಕ್ಕೆ ಇತರ ಭಾಷೆಗಳಿಂದ ಟಾಪ್ ನಾಯಕಿಯರನ್ನು ಕರೆತಂದಿದ್ದಾರೆ. ತೇಜು ಅಶ್ವಿನಿ ಅವರು ಪ್ರೇಮಲೋಕ 2ಗೆ ನಾಯಕಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಪ್ರೇಮಲೋಕ 2' updates: ಪುತ್ರ ಮನೋರಂಜನ್, ವಿಕ್ರಮ್ ಜೊತೆ ರವಿಚಂದ್ರನ್; ಚಿತ್ರದಲ್ಲಿ 25 ಹಾಡು!
ಸಿನಿಮಾ ಸುದ್ದಿ

'ಪ್ರೇಮಲೋಕ 2' updates: ಪುತ್ರ ಮನೋರಂಜನ್, ವಿಕ್ರಮ್ ಜೊತೆ ರವಿಚಂದ್ರನ್; ಚಿತ್ರದಲ್ಲಿ 25 ಹಾಡು!

ರಿಯಾಲಿಟಿ ಶೋ ಮತ್ತು ವಿವಿಧ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ, ನಿರ್ದೇಶಕ ವಿ ರವಿಚಂದ್ರನ್ ಅವರು ತಮ್ಮ ಬಹುನಿರೀಕ್ಷಿತ ಪ್ರೇಮಲೋಕ 2 ಚಿತ್ರದ ಬಗ್ಗೆ ಹಲವು ಅಪ್ಡೇಟ್ಸ್‌ಗಳನ್ನು ನೀಡಿದ್ದಾರೆ. ತಮ್ಮ ಮುಂಬರುವ ಸಿನಿಮಾ ತಪಸ್ಸಿ ಕುರಿತಾದ ಚರ್ಚೆಯ ಸಮಯದಲ್ಲಿ ಪ್ರೇಮಲೋಕ 2 ಬಗ್ಗೆಯೂ ಕೆಲವು ಆಸಕ್ತಿಕರ ಸುದ್ದಿಗಳನ್ನು ಹಂಚಿಕೊಂಡಿದ್ದಾರೆ.