ಸಿನಿಮಾ ಸುದ್ದಿಕ್ಲಾಂತ ಸಿನಿಮಾದ ಟೀಸರ್ ಬಿಡುಗಡೆ; ಚಿತ್ರರಂಗದ ಹೊಸ ಸವಾಲುಗಳ ಬಗ್ಗೆ ನಟಿ ಸಂಗೀತಾ ಭಟ್ ಮಾತು
ಪ್ರೀತಿ ಗೀತಿ ಇತ್ಯಾದಿ, ಎರಡನೆ ಸಲ, ಮತ್ತು ದಯವಿಟ್ಟು ಗಮನಿಸಿ ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾದ ಸಂಗೀತಾ ಭಟ್, 2018ರಲ್ಲಿ ಚಿತ್ರರಂಗದಿಂದ ವಿರಾಮ ತೆಗೆದುಕೊಂಡರು. ಇದೀಗ ವೈಭವ್ ಪ್ರಶಾಂತ್ ನಿರ್ದೇಶನದ ಮುಂಬರುವ ಚಿತ್ರ 'ಕ್ಲಾಂತ' ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.