ಪ್ರೀತಂ ಜೆ ಗೌಡ

ಪ್ರಜ್ವಲ್ ರೇವಣ್ಣ, ಪ್ರೀತಂ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ರಾಧಾ ಮೋಹನ್ ದಾಸ್ ಅಗರ್ವಾಲ್ ಮುಂದು!
ಹಾಸನ ಬಿಜೆಪಿ ಮಾಜಿ ಶಾಸಕ ಪ್ರೀತಂ ಜೆ ಗೌಡ ವಿರುದ್ಧ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರು ಶನಿವಾರ ದೂರು ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ಬಿಜೆಪಿ ಮತ್ತು ಜೆಡಿಎಸ್‌ನ ತುರ್ತು ಸಮನ್ವಯ ಸಭೆ ನಡೆಸಿದರು.

ನನ್ನ ಮನೆಗೆ ಕಲ್ಲೆಸೆದವರೊಂದಿಗೆ ಚೆನ್ನಾಗಿರಲು ಹೇಗೆ ಸಾಧ್ಯ? ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಜೀತ ಮಾಡಲು ಸಿದ್ದರಿಲ್ಲ; ಪ್ರೀತಂ ಗೌಡ
ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಣ್ಣ ಜಿಲ್ಲೆಯಲ್ಲಿ ಒಕ್ಕಲಿಗ ನಾಯಕರು ಬೆಳೆಯಬಾರದು, ಪ್ರೀತಂ ಜೆ. ಗೌಡ ಬೆಳೆಯಬಾರದು ಎಂದು ವಿಧಾನಸಭಾ ಚುನಾವಣೆಯಲ್ಲಿ ತನ್ನ ವಿರುದ್ಧ ಪ್ರಚಾರ ಮಾಡಿದ್ದರು. ಜೆಡಿಎಸ್‌ನವರು ನನ್ನ ಮನೆಗೆ ಕಲ್ಲು ಹೊಡೆದರು. ಈಗ ಅವರೊಂದಿಗೆ ಚೆನ್ನಾಗಿರಲು ಹೇಗೆ ಸಾಧ್ಯ ಎಂದು ಪ್ರೀತಂಗೌಡ ಪ್ರಶ್ನಿಸಿದರು.

ಕೆಡಿಪಿ ಸಭೆಯಲ್ಲೇ ಎಚ್‌ಡಿ ರೇವಣ್ಣ - ಪ್ರೀತಂ ಗೌಡ ನಡುವೆ ಜಟಾಪಟಿ
ಕೊನೆಗೂ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಹಾಗೂ ಹಾಸನ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಅವರ ನಡುವಿನ ಶೀತಲ ಸಮರ ಬುಧವಾರ ಸ್ಫೋಟಗೊಂಡಿದೆ.

