ರಾಜ್ಯಬೆಂಗಳೂರು: ಹುಲಿ, ಚಿರತೆ ಉಗುರು, ಪ್ರಾಣಿಗಳ ಚರ್ಮ ವಶ, ನಾಲ್ವರ ಬಂಧನ
400 ಚಿರತೆ ಉಗುರುಗಳು, ಆರು ಹುಲಿ ಉಗುರುಗಳು, ಒಂದು ಹೆಣ್ಣು ಕೃಷ್ಣಮೃಗದ ಚರ್ಮ, ಒಂದು ನರಿ ಚರ್ಮ ಮತ್ತು ಏಳು ಪ್ಯಾಂಗೊಲಿನ್ ಉಗುರುಗಳನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದು ಬೃಹತ್ ವನ್ಯಜೀವಿ ಸಂಬಂಧಿತ ವಸ್ತುಗಳ ಕಳ್ಳಸಾಗಣೆಯನ್ನು ಬೇಧಿಸಿದ್ದಾರೆ.