ವಿಶೇಷಪ್ರೀತಿಯ 'ಹಸ್ಕಿ'ಯನ್ನು ಕದ್ದೊಯ್ದ ಕಳ್ಳರು; ಹುಡುಕಿ ಮರಳಿ ತರುವಲ್ಲಿ ಯಶಸ್ವಿಯಾದ 20 ವರ್ಷದ ಬಾಲೆ
ರಾಜಾಜಿನಗರದ ನಿವಾಸಿ ಚೈತ್ರಾ ಎಂಬ ವಿದ್ಯಾರ್ಥಿನಿ ತನ್ನ 5 ತಿಂಗಳ ಹಸ್ಕಿ ತಳಿಯ ನಾಯಿ ‘ಶೌರ್ಯ’ ಕಳ್ಳತನವಾದ ನಂತರ ಮೂರು ದಿನಗಳಲ್ಲಿ ಅದನ್ನು ಹುಡುಕಿ ತನ್ನೊಂದಿಗೆ ಕರೆತರಲು ‘ಪೊಲೀಸ್’ ಮತ್ತು ‘ಪತ್ತೆದಾರ’ರಾಗಬೇಕಾಯಿತು.