ಪ್ರವಾಸಿಗರು

ವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!
ಇ-ಸಿಗರೇಟ್ ಹಾಗೂ ವೇಪರೈಸರ್‌ಗಳ ವಿಚಾರದಲ್ಲೂ ಇದೇ ಎಚ್ಚರಿಕೆ ಅಗತ್ಯ. ಸಿಂಗಾಪುರದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಮತ್ತು ವೇಪರೈಸರ್‌ಗಳನ್ನು ನಿಷೇಧಿತ ತಂಬಾಕು ಉತ್ಪನ್ನಗಳಾಗಿ ಪರಿಗಣಿಸಲಾಗುತ್ತದೆ.

ಪ್ರವಾಸಿಗರಿಗೆ ಗುಣಮಟ್ಟದ ಆಹಾರ ಒದಗಿಸಲು KSTDC ಮಾಸ್ಟರ್‌ಪ್ಲಾನ್: ನವೆಂಬರ್‌ನಿಂದ 'ಮಯೂರ ರುಚಿ ಆನ್ ವೀಲ್ಸ್' ಸೇವೆ ಆರಂಭ..!
ಲೈವ್ ಕಿಚನ್ ಹೊಂದಿರುವ, ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನಗಳನ್ನು ನಿರ್ವಹಿಸಲು ಈ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿರುವವರನ್ನು ಆಯ್ಕೆ ಮಾಡಲಾಗುತ್ತದೆ. ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳುವುದರ ಜತೆಗೆ ತ್ವರಿತ ಸೇವೆ ನೀಡುವುದು ಉದ್ದೇಶ.

ಮಲ್ಲಳ್ಳಿ ಜಲಪಾತಕ್ಕೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ; 23 ಪ್ರವಾಸಿಗರಿಗೆ ಗಾಯ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಬಸ್‌ನ ಕಿಟಕಿಗಳ ಗಾಜುಗಳನ್ನು ಒಡೆದು ಒಳಗಿದ್ದ ಪ್ರವಾಸಿಗರನ್ನು ಹೊರತೆಗೆದಿದ್ದಾರೆ.

ಆನೆ ಶಿಬಿರಗಳಿಗೆ ಹೊಸ ರೂಲ್ಸ್: ಪ್ರವಾಸಿಗರಿಗೆ 30 ಅಡಿ ಅಂತರ ಕಡ್ಡಾಯ, ಮುಟ್ಟುವುದು-ಆಹಾರ ನೀಡುವುದು ಸಂಪೂರ್ಣ ನಿಷೇಧ..!
ಮೇ 19ರಂದು ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ತಮಿಳುನಾಡಿನ ಪ್ರವಾಸಿಗರೊಬ್ಬರು ಮೃತಪಟ್ಟ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲು ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.

'ಕಂಡಕಂಡಲ್ಲಿ ಕಸ ಎಸೆಯುವವರಾಗಿದ್ದರೆ ಈ ರಾಜ್ಯಕ್ಕೆ ಭೇಟಿ ನೀಡುವ ಯೋಚನೆ ಕೂಡ ಮಾಡಬೇಡಿ': ಆನಂದ್ ಮಹೀಂದ್ರಾ
ಎಕ್ಸ್‌ನಲ್ಲಿ ಹಂಚಿಕೊಂಡ ಅವರ ಪೋಸ್ಟ್ ವೈರಲ್ ಆಗಿದ್ದು, ನಾಗರಿಕ ಪ್ರಜ್ಞೆ ಮತ್ತು ಸಿಕ್ಕಿಂ ಭಾರತದ ಅತ್ಯಂತ ಸ್ವಚ್ಛ ರಾಜ್ಯಗಳಲ್ಲಿ ಒಂದಾಗಿ ಏಕೆ ಎದ್ದು ಕಾಣುತ್ತದೆ ಎಂಬುದರ ಕುರಿತು ವ್ಯಾಪಕ ಚರ್ಚೆಗೆ ನಾಂದಿ ಹಾಡಿತು.

ಸಾಕಾನೆ ಕಾದಾಟದಲ್ಲಿ ಸಿಲುಕಿ ಮಹಿಳೆ ಸಾವು: ಪ್ರವಾಸಿಗರಿಗೆ ದುಬಾರೆ ಕ್ಯಾಂಪ್ ನಿರ್ಬಂಧ!
ಸೋಮವಾರ ಮಡಿಕೇರಿಯ ದುಬಾರೆ ಆನೆ ಶಿಬಿರದಲ್ಲಿ ತಮಿಳುನಾಡಿನ 33 ವರ್ಷದ ಮಹಿಳೆಯೊಬ್ಬರ ಸಾವಿನ ನಂತರ ಈ ನಿರ್ದೇಶನಗಳನ್ನು ನೀಡಲಾಗಿದೆ.

ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಪ್ರವಾಸಿಗರ ಮೇಲೆ ಏಕಾಏಕಿ ಕಾಡಾನೆ ದಾಳಿ; ಹೆಚ್ಚಿದ ಭೀತಿ
ನದಿಯಲ್ಲಿ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದ ವೇಳೆ, ನೀರು ಕುಡಿಯಲು ಬಂದಿರುವ ಕಾಡನೆ ಇದ್ದಕ್ಕಿದ್ದಂತೆ ಪ್ರವಾಸಿಗರ ಮೇಲೆ ಎರಗಿದೆ.

ಹಂಪಿ ಬಳಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಆರೋಪಿಗಳು ದೋಷಿ; ಕೋರ್ಟ್ ಮಹತ್ವದ ತೀರ್ಪು, ಫೆ.16ಕ್ಕೆ ಶಿಕ್ಷೆ ಪ್ರಕಟ..!
ಆರೋಪಿಗಳು ಮೂವರು ಪುರುಷ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಅವರನ್ನು ಕಾಲುವೆಗೆ ತಳ್ಳಿದ್ದರು. ಈ ವೇಳೆ ಇಬ್ಬರು ಮಹಿಳಾ ಪ್ರವಾಸಿಗರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಸಂತ್ರಸ್ತ ಮಹಿಳೆಯರಲ್ಲಿ ಒಬ್ಬರು ಇಸ್ರೇಲ್ ಪ್ರಜೆಯಾಗಿದ್ದರೆ, ಮತ್ತೊಬ್ಬರು ಭಾರತೀಯ ಮಹಿಳೆಯಾಗಿದ್ದಾರೆ.

ಒಂದೇ ವಾರದಲ್ಲಿ ಹಂಪಿಗೆ 4 ಲಕ್ಷ ಪ್ರವಾಸಿಗರ ಆಗಮನ: ಸೂಕ್ತ ವಸತಿ ಸೌಲಭ್ಯಗಳಿಲ್ಲದೆ ಹಲವರ ಪರದಾಟ
ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ, ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ ಶಾಲಾ ಕಾಲೇಜುಗಳು ಆಯೋಜಿಸಿದ ಶೈಕ್ಷಣಿಕ ಪ್ರವಾಸಗಳು ಈ ತೀವ್ರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

