ರಾಜ್ಯಮೈಸೂರು: ಪ್ರವಾಸಿಗರ ಕಾರಿನಿಂದ ಎರಡು ಲ್ಯಾಪ್ಟಾಪ್, ಐಫೋನ್ ದೋಚಿದ ದುಷ್ಕರ್ಮಿಗಳು
ಇತ್ತೀಚೆಗೆ ಮೈಸೂರಿಗೆ ಬಂದಿದ್ದ ಪ್ರವಾಸಿಗರೊಬ್ಬರ ಕಾರಿನಲ್ಲಿಟ್ಟಿದ್ದ ಎರಡು ಲ್ಯಾಪ್ಟಾಪ್ ಮತ್ತು ಐಫೋನ್ ಅನ್ನು ದುಷ್ಕರ್ಮಿಗಳು ಎಗರಿಸಿದ್ದಾರೆ. ಅಮೆಜಾನ್ನಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಯಾಗಿರುವ ಬೆಂಗಳೂರಿನ ಹೆಬ್ಬಾಳ ನಿವಾಸಿ ರತ್ನ ಪ್ರಕಾಶ್ ಪಿಳ್ಳೈ (32) ಎರಡು ಲ್ಯಾಪ್ಟಾಪ್ ಮತ್ತು ಸೆಲ್ಫೋನ್ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.