ರಾಜ್ಯನೀಟ್ ಪರೀಕ್ಷೆ: 720 ಕ್ಕೆ 710 ಅಂಕ ಗಳಿಸಿ ಬೀದರ್ ನ ಕಾರ್ತಿಕ್ ರೆಡ್ಡಿ ರಾಜ್ಯಕ್ಕೆ ಟಾಪರ್
ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 9ನೇ ರ್ಯಾಂಕ್ ಪಡೆದಿರುವ ಬೀದರ್ ಮೂಲದ ಕಾರ್ತಿಕ್ ರೆಡ್ಡಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.