ರಾಜಕೀಯಪ್ರಜ್ವಲ್ ರೀತಿ ಸಿದ್ದು, ಪರಮೇಶ್ವರ್ ವಿಡಿಯೋ ಹೊರಬರಬಹುದು; ಈಗಲೇ ಆ 'ಮಹಾನಾಯಕ'ನನ್ನು ತಡೆಯಿರಿ': ಜಾರಕಿಹೊಳಿ
ನನ್ನ ಖಾಸಗಿ ವಿಡಿಯೊಗಳು ಹೊರಗೆ ಬಂದಾಗಲೇ ನಾನು ಎಚ್ಚರಿಕೆ ಕೊಟ್ಟಿದ್ದೆ. ಮಹಾನಾಯಕನೊಬ್ಬ ಪ್ರತಿಷ್ಠಿತ ಕುಟುಂಬಕ್ಕೆ ಖೆಡ್ಡಾ ತೋಡುತ್ತಿದ್ದಾನೆ ಎಂದಾಗ ನನ್ನ ಮಾತು ನಂಬಿರಲಿಲ್ಲ. ಈಗ ಏನಾಗಿದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪ್ರಶ್ನಿಸಿದರು.