ದೇಶದೆಹಲಿ ಹಿಂಸಾಚಾರ: 20 ಕ್ಕೇರಿದ ಸಾವಿನ ಸಂಖ್ಯೆ, ಪರಿಸ್ಥಿತಿ ಕುರಿತು ಸಂಪುಟ, ಪ್ರಧಾನಿಗೆ ವರದಿ ಸಲ್ಲಿಸಲಿರುವ ದೋವಲ್
ಪೌರತ್ವ ತಿದ್ದುಪಡಿ ಪರ-ವಿರೋಧವಾಗಿ ಈಶಾನ್ಯ ದೆಹಲಿಯಲ್ಲಿ ಶನಿವಾರ ಸಣ್ಣ ಪ್ರಮಾಧಲ್ಲಿ ಆರಂಭವಾಗಿ, ಭಾನುವಾರ-ಸೋಮವಾರಗಳಂದು ಹಿಂಸಾಚಾರ ರೂಪ ಪಡೆದುಕೊಂಡಿದ್ದ ಪ್ರತಿಭಟನೆ, ಮಂಗಳವಾರ ರಕ್ತಪಾತಕ್ಕೆ ಕಾರಣವಾಗಿದೆ. ಮಂಗಳವಾರ ಬೆಳಿಗ್ಗೆಯಿಂದಲೂ ಜಫ್ರಾಬಾದ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಹಿಂಸಾಚಾರ ನಡೆಸಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ.