ರಾಜ್ಯವಾಹನ ಕಳೆದುಹೋಗಿದೆಯೇ?: ಚಿಂತಿಸಬೇಡಿ, ಆನ್ ಲೈನ್ ನಲ್ಲಿ ದೂರು ಸಲ್ಲಿಸಿ
ರಾಜ್ಯದ ಯಾವುದೇ ಭಾಗದಲ್ಲಿ ನಿಮ್ಮ ವಾಹನ ಕಳೆದುಹೋಗಿದೆ ಎಂದರೆ ಇನ್ನು ಮುಂದೆ ದೂರು ದಾಖಲಿಸಲು ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಪೊಲೀಸ್ ಠಾಣೆಗೆ ಅಲೆಯಬೇಕೆಂದೇನಿಲ್ಲ. ಕರ್ನಾಟಕ ಪೊಲೀಸ್ ವೆಬ್ ಸೈಟ್ www.ksp.karnataka.gov.in ಗೆ ಲಾಗ್ ಇನ್ ಆಗಿ ಆನ್ ಲೈನ್ ನಲ್ಲಿ ದೂರು ಸಲ್ಲಿಸಿ ಎಫ್ಐಆರ್ ಪಡೆಯಿರಿ.