ದೇಶಕೆವೈಸಿ ಅಪ್ ಡೇಟ್ ಮೆಸೇಜ್: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಖದೀಮರು; ತಿರುವನಂತಪುರಂ ನಗರ ಕಮಿಷನರ್ ಕಚೇರಿ ಖಾತೆಗೆ ಕನ್ನ!
ಕಮಿಷನರ್ ಕಚೇರಿ ಅಕೌಂಟ್ ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಕ್ಯಾಷಿಯರ್, ಸ್ಕ್ಯಾಮರ್ಗಳು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ, ಒನ್-ಟೈಮ್ ಪಾಸ್ವರ್ಡ್ (OTP) ನೀಡಿದ ನಂತರ ಹಣ ಕಳೆದು ಹೋಗಿದೆ. ಡಿಸೆಂಬರ್ 18 ರಂದು ಈ ಘಟನೆ ನಡೆದಿದ್ದು, ಹಣವನ್ನು ವರ್ಗಾಯಿಸಿದ ಖಾತೆಯನ್ನು ಬ್ಲಾಕ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.