ರಾಜಕೀಯಪೂರ್ವಜ್ ವಿಶ್ವನಾಥ್ ಗೆ ಕಾಂಗ್ರೆಸ್ ಸಖ್ಯ: ಹದಗೆಟ್ಟ ಇಬ್ಬರು ಕುರುಬ ನಾಯಕರ ಸಂಬಂಧಕ್ಕೆ ತೇಪೆ?
ಬಿಜೆಪಿ ಎಂಎಲ್ಸಿ ಅಡಗೂರು ವಿಶ್ವನಾಥ್ ಅವರ ಪುತ್ರ ‘ಸಿದ್ದರಾಮಯ್ಯ ಅಭಿಮಾನಿ’ ಪೂರ್ವಜ್ ವಿಶ್ವನಾಥ್ ಅವರು ಕಾಂಗ್ರೆಸ್ ಸೇರುವುದು ಇಬ್ಬರು ಕುರುಬ ನಾಯಕರಾದ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ನಡುವಿನ ಹದಗೆಟ್ಟ ಸಂಬಂಧವನ್ನು ಮತ್ತೆ ಸರಿ ಮಾಡಲಿದೆಯಾ ಎಂಬ ಮಾತುಗಳು ಕೇಳಿ ಬರುತ್ತಿವೆ.