ಕ್ರಿಕೆಟ್ಟೆಸ್ಟ್ ಶ್ರೇಯಾಂಕ: ಎರಡನೇ ಸ್ಥಾನದಲ್ಲಿಯೇ ಉಳಿದ ವಿರಾಟ್ ಕೊಹ್ಲಿ, ಬುಮ್ರಾ 9ನೇ ಸ್ಥಾನ
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಂಗಳವಾರ ಬಿಡುಗಡೆ ಮಾಡಿದ ಐಸಿಸಿ ಟೆಸ್ಟ್ ಶ್ರೇಯಾಂಕದ ಬ್ಯಾಟಿಂಗ್ ವಿಭಾಗದಲ್ಲಿ ಭಾರತ ತಂಡದ ನಾಯಕ ವಿರಾಟ್ ಎರಡನೇ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಕೊಹ್ಲಿ ಜತೆ ಇನ್ನೂ ಇಬ್ಬರು ಬಾರತೀಯ ಬ್ಯಾಟ್ಸ್ ಮನ್ ಗಳು ಅಗ್ರ 10ರೊಳಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.