ದೇಶಪುತ್ರಿಯರ ಶಿಕ್ಷಣಕ್ಕೆ ಬರಿಗಾಲಿನಲ್ಲಿ ಓಡಿ ನಗದು ಬಹುಮಾನ ಗೆದ್ದ ತಾಯಿ: ಮಹಾರಾಷ್ಟ್ರದಲ್ಲೊಬ್ಬ ಮಾದರಿ ಮಹಿಳೆ!
ರಮಾಬಾಯಿ ರಣವೀರ್ ಅವರು ಆರಂಭದಲ್ಲಿ ಸೀರೆ ಹಾಗೂ ಚಪ್ಪಲಿ ಧರಿಸಿ ಓಟ ಆರಂಭಿಸಿದ್ದರು. ಆದರೆ ಓಡುತ್ತಿದ್ದಂತೆ ಚಪ್ಪಲಿ ರಸ್ತೆಯಲ್ಲಿ ಜಾರಲಾರಂಭಿಸಿ ವೇಗ ಕಾಯ್ದುಕೊಳ್ಳಲು ತೊಂದರೆಯಾಯಿತು. ಆದರೂ ಹಿಮ್ಮೆಟ್ಟದ ಅವರು ಚಪ್ಪಲಿಯನ್ನು ಕಳಚಿ ಬರಿಗಾಲಿನಲ್ಲೇ ಓಟ ಮುಂದುವರಿಸಿದರು.