ರಾಜ್ಯಸಿಗ್ನಲಿಂಗ್ ಪರೀಕ್ಷೆ; 5 ದಿನ ಮೆಟ್ರೊ ಗ್ರೀನ್ ಲೈನ್ ಸಂಚಾರದಲ್ಲಿ ವ್ಯತ್ಯಯ; ಪ್ರಯಾಣಿಕರ ಪರದಾಟ
ಬೆಳಗ್ಗೆ 5 ಗಂಟೆಗೆ ಪೀಣ್ಯ ಇಂಡಸ್ಟ್ರಿಯಿಂದ ಹೊರಡುವ ರೈಲುಗಳಿಂದ ನಾಗಸಂದ್ರ, ಜಾಲಹಳ್ಳಿ ಮತ್ತು ದಾಸರಹಳ್ಳಿಯಲ್ಲಿ ಸಾಮಾನ್ಯವಾಗಿ ಹತ್ತುತ್ತಿದ್ದ ಪ್ರಯಾಣಿಕರು ಪೀಣ್ಯದಲ್ಲಿಯೇ ಇಳಿಯಬೇಕಾಗಿ ಬಂತು. ತುಮಕೂರು ಮುಖ್ಯ ರಸ್ತೆಗೆ ಹೋಗುವ ರೈಲಿನ ಸಂಚಾರಕ್ಕೆ ಪ್ರಯಾಣಿಕರು ಸಾಕಷ್ಟು ಉದ್ದ ಸಾಲಿನಲ್ಲಿ ನಿಂತರು.