ಪಿಪಿಇ ಕಿಟ್ ಗಳು

ಎಲ್ಲೆಂದರಲ್ಲಿ ಮಾಸ್ಕ್, ಗ್ಲೌಸ್ ಎಸೆತ, ಪಿಪಿಇ ಕಿಟ್ ಗಳು: ಕೋವಿಡ್-19 ಜೊತೆಗೆ ಪರಿಸರಕ್ಕೂ ತೀವ್ರ ಹಾನಿ
ಇಂದಿನ ಕೋವಿಡ್-19 ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ಸುರಕ್ಷತೆ ಜನರ ಬಹುಮುಖ್ಯ ಕಾಳಜಿಯಾಗಿದೆ. ಕೋವಿಡ್-19 ವೈರಾಣುವಿನಿಂದ ರಕ್ಷಿಸಿಕೊಳ್ಳಲು ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಬಳಸುತ್ತಿರುವ ಪಿಪಿಇ ಕಿಟ್ ಗಳು, ಗ್ಲೌಸ್, ಮಾಸ್ಕ್, ಶೂ ಕವರ್ ಗಳು ಇಂದು ಪರಿಸರಕ್ಕೆ ಭಾರೀ ಹಾನಿಕಾರಕವಾಗಿ ಪರಿಣಮಿಸುತ್ತಿದೆ.

ಕೋವಿಡ್-19: ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ 2 ಕೋಟಿ ರೂ. ನಷ್ಟು ಅಕ್ರಮ; ಕೆಆರ್ ಎಸ್ ಪಕ್ಷದಿಂದ ದೂರು ಸಲ್ಲಿಕೆ
ಕೋವಿಡ್-19 ವಿರುದ್ಧ ಹೋರಾಡಲು ರಕ್ಷ ಕವಚ ಪಿಪಿಇ ಕಿಟ್ ಗಳು, IV ಪ್ಲ್ಯೂಯಿಡ್ ಮತ್ತು ಡಯಾಲಿಸಿಸ್ ಯಂತ್ರಗಳ ಖರೀದಿಯಲ್ಲಿ ರಾಜ್ಯ ಔಷಧಗಳ ಲಾಜೆಸ್ಟಿಕ್ ಮತ್ತು ದಾಸ್ತಾನು ಸೊಸೈಟಿಯಿಂದ 1.98 ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ರಾಜ್ಯ ರಾಷ್ಟ್ರ ಸಮಿತಿ ರಾಜಕೀಯ ಪಕ್ಷ ಆರೋಪಿಸಿದೆ.

ರಾಜ್ಯದಲ್ಲಿ ಸಾಕಷ್ಟು ವೈಯಕ್ತಿಕ ಸುರಕ್ಷತಾ ಸಾಧನ- ಪಿಪಿಇ ಕಿಟ್ ಗಳಿವೆ: ಮುಖ್ಯಮಂತ್ರಿ ಯಡಿಯೂರಪ್ಪ
ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಅಗತ್ಯವಿರುವ ವೈಯಕ್ತಿಕ ಸುರಕ್ಷತಾ ಸಾಧನಗಳ ಕೊರತೆಯಿಲ್ಲ, ರಾಜ್ಯದಲ್ಲಿ ಸಾಕಷ್ಟು ಪಿಪಿಇ ಕಿಟ್ ಗಳು ಲಭ್ಯವಿರುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

