ಪಿಪಿಇ ಕಿಟ್

ಚಾಮರಾಜನಗರ: ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಸಚಿವ ಸುರೇಶ್ ಕುಮಾರ್ ಭೇಟಿ; ರೋಗಿಗಳ ಆರೋಗ್ಯ ವಿಚಾರಣೆ
ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿದ ಬೆನ್ನಲ್ಲೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ವೈಯಕ್ತಿಕ ಆರೋಗ್ಯ ಲೆಕ್ಕಿಸದೇ ತಾವೇ ಸ್ವತಃ ಪಿಪಿಇ ಕಿಟ್ ಧರಿಸಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡಿನೊಳಗೆಲ್ಲಾ ಓಡಾಡಿದರು.

ಮದುವೆ ದಿನವೇ ವಧುವಿಗೆ ಕೊರೋನಾ ದೃಢ: ಕೋವಿಡ್ ಕೇರ್ ಸೆಂಟರ್ ನಲ್ಲಿ ಪಿಪಿಇ ಕಿಟ್ ಧರಿಸಿ ಮದುವೆಯಾದ ನವಜೋಡಿ
ಮದುವೆಯ ದಿನದಂದೇ ವಧುವಿಗೆ ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆ ದಂಪತಿಗಳು ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಕಿಟ್ ಧರಿಸಿ ಮದುವೆಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಆರ್.ಆರ್.ನಗರ ಉಪಚುನಾವಣೆ: ಮತ ಚಲಾಯಿಸುವ ಕೋವಿಡ್ ಸೋಂಕಿತರಿಗೆ ಬಿಬಿಎಂಪಿಯಿಂದ ಪಿಪಿಇ ಕಿಟ್
ಉಪಚುನಾವಣೆ ಮತದಾನದ ವೇಳೆ ಕೋವಿಡ್ ಹರಡುವುದನ್ನು ತಪ್ಪಿಸುವ ಪ್ರಯತ್ನವಾಗಿ ರಾಜರಾಜೇಶ್ವರಿ ನಗರದಲ್ಲಿ (ಆರ್.ಆರ್.ನಗರ ) ಕೋವಿಡ್ ರೋಗಿಗಳಿಗೆ ಸಹ ಮತ ಚಲಾಯಿಸಲು ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಹೇಳಿದರು.

ಒಂದೇ ತಿಂಗಳಲ್ಲಿ 23 ಲಕ್ಷ ಪಿಪಿಇ ಕಿಟ್ ಗಳ ರಫ್ತು: ಜಾಗತಿಕ ಮಟ್ಟದಲ್ಲಿ ಭಾರತ ಸಾಧನೆ
ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ)ಗಳ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವುದರೊಂದಿಗೆ ಭಾರತ, 23 ಲಕ್ಷ ಪಿಪಿಇಗಳನ್ನು ಅಮೆರಿಕ, ಯುನೈಟೆಡ್ ಕಿಂಗ್‍ಡಮ್, ಯುಎಇ, ಸೆನೆಗಲ್ ಮತ್ತು ಸ್ಲೊವೇನಿಯಾಗೆ ರಫ್ತು ಮಾಡುವುದರ ಮೂಲಕ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದೆ.

ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಒಪಿಡಿ ವೈದ್ಯರಿಗೆ ಪಿಪಿಇ ಕಿಟ್ ಇಲ್ಲ!
ಇದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಹೊರರೋಗ ವಿಭಾಗದ ವೈದ್ಯರು ಪಿಪಿಇ ಕಿಟ್ ಗಳಿಲ್ಲದೆ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ. ರೋಗಿಗಳಿಗೆ ವೈದ್ಯೋಪಚಾರ ಮಾಡುವ ಸಮಯದಲ್ಲಿ ತಮಗೆ ಎಲ್ಲಿ ಕೊರೋನಾ ಸೋಂಕು ತಗುಲುತ್ತದೋ ಎಂಬ ಭಯ ಈ ವೈದ್ಯರನ್ನು ಅಪಾರವಾಗಿ ಕಾಡುತ್ತಿದೆ.

14 ಪೊಲೀಸರಿಗೆ ಕೊರೋನಾ ಸೋಂಕು: ಎಚ್ಚೆತ್ತ ಗೃಹ ಇಲಾಖೆಯಿಂದ ಪಿಪಿಇ ಕಿಟ್
14 ಪೊಲೀಸರಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆಗೆ ಹೊಸ ಸವಾಲು ಎದುರಾಗಿದೆ, ಈ 14 ಪೊಲೀಸರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 585 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ತನ್ನ ಸುರಕ್ಷತೆಯನ್ನು ಲೆಕ್ಕಿಸದೆ ಪಿಪಿಇ ಕಿಟ್ ತೆಗೆದು ಕೊರೋನಾ ರೋಗಿಯ ಪ್ರಾಣ ಉಳಿಸಿದ ಏಮ್ಸ್ ಆಸ್ಪತ್ರೆ ವೈದ್ಯ, 14 ದಿನಗಳ ಕ್ವಾರಂಟೈನ್ ಗೆ!
ಮಾರಕ ಕೊರೋನಾ ರೋಗಿಯ ಪ್ರಾಣ ಉಳಿಸಲು ತನ್ನ ರಕ್ಷಣೆಗೆ ಹಾಕಿಕೊಂಡಿದ್ದ ಪಿಪಿಇ ಕಿಟ್ ತೆಗೆದು ರೋಗಿಯ ಪ್ರಾಣ ಉಳಿಸಿದ ಏಮ್ಸ್ ಆಸ್ಪತ್ರೆಯ ವೈದ್ಯನನ್ನು 14 ದಿನಗಳ ಕ್ವಾರಂಟೈನ್ ಮಾಡಲಾಗಿದೆ.

ಉಡುಪಿ: ನದಿಯಲ್ಲಿ ಬಳಸಿದ ಪಿಪಿಇ ಪತ್ತೆ, ಪ್ರಕರಣ ದಾಖಲು
ಕೋವಿಡ್ -೧೯ ರೋಗಿಗಳ ಚಿಕಿತ್ಸೆ ವೇಳೆ ವೈದ್ಯರು ಧರಿಸುವ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ)ವಾಗಿರುವ ರಕ್ಷಾ ಕವಚವೊಂದು ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಗಳ ಬಳಿಯ ನದಿಯಲ್ಲಿ ಕಂಡುಬಂದಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.

ಚೀನಾ ಕಳಿಸಿದ್ದ 1.70 ಲಕ್ಷ ಪಿಪಿಇ ಕಿಟ್ ಗಳ ಪೈಕಿ ಬರೊಬ್ಬರಿ 63 ಸಾವಿರ ಕಿಟ್ ಗಳು ಕೆಲಸಕ್ಕೆ ಬಾರದವು!
ಚೀನಾ ಭಾರತಕ್ಕೆ ಕಳಿಸಿದ್ದ 1.70 ಲಕ್ಷ ಪಿಪಿಇ ಕಿಟ್ ಗಳ ಪೈಕಿ ಬರೊಬ್ಬರಿ 63 ಸಾವಿರ ಕಿಟ್ ಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲಗೊಂಡಿವೆ.

